ಟೀಸರ್


ಟೀಸರ್ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

ಅರ್ಥ

ನಾಮಪದ:

೧. ಬಿಡುಗಡೆಗೆ ಮುಂಚೆ ಆಸಕ್ತಿ ಕುದುರಿಸಲು ಹಾಗೂ ಬಿಡುಗಡೆಯ ದಿನಾಂಕ ಘೋಷಿಸಲು ಸಿನಿಮಾ ಅಥವಾ ಧಾರಾವಾಹಿ ಅಥವಾ ವಸ್ತು ಅಥವಾ ಸಂಗೀತದ ಚಿಕ್ಕ ಜಾಹೀರಾತು ಅಥವಾ ಪರಿಚಯ.

೨. ಪತ್ರಿಕೆ, ಟಿವಿ, ಸಾಮಾಜಿಕ ತಾಣ ಇತರ ಮಾಧ್ಯಮಗಳಲ್ಲಿ ಬರುವ ಹೊಸ ವಸ್ತು / ಪ್ರಾಡಕ್ಟ್ ಬಗ್ಗೆ ಆಸಕ್ತಿ ಕೆರಳಿಸಲು ಬರುವ ಜಾಹೀರಾತು.

ಉತ್ಪತ್ತಿ

ಇಂಗ್ಲೀಷ್ ನ ಟೀಸ್ (Tease)  ಪದದಿಂದ ಟೀಸರ್ ಪದ ಹುಟ್ಟಿದೆ.

ಉಪಯೋಗ

  • ನಿನ್ನೆ ತಾನೇ ಜನಪ್ರಿಯ ನಟ ಚತುರಸಿಂಹರ ಸಿನಿಮಾ ಟೀಸರ್ ಬಿಡುಗಡೆ ಆಯ್ತು.

  • ಹೊಚ್ಚ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯ ಟೀಸರ್ ನಿನ್ನೆ ಯೂಟ್ಯೂಬ್ ಅಲ್ಲಿ ಪ್ರಪಂಚಾದ್ಯಂತ ಬಿಡುಗಡೆ ಆಯ್ತು.
  • ನಿನ್ನೆ ಪತ್ರಿಕೆಯೊಂದರಲ್ಲಿ ಹೊಸತಾಗಿ ಬಿಡುಗಡೆ ಆಗಲಿರುವ ಕಾರಿನ ಟೀಸರ್ ಬಂದಿತ್ತು. ಅದರ ಹೆಸರು ಇನ್ನೂ ಪ್ರಕಟಿಸಿಲ್ಲ.

ವಿವರ

ಗಮನಿಸಿ ಸಿನಿಮಾ ಟೀಸರ್ ಬೇರೆ ಟ್ರೇಲರ್ ಬೇರೆ.

ಇದನ್ನು ಸಾಮಾನ್ಯವಾಗಿ ಸಿನಿಮಾ ಅಥವಾ ಧಾರಾವಾಹಿ ಗೂ ಹಲವು ತಿಂಗಳು ಮುಂಚೆ ಪ್ರಕಟಿಸುತ್ತಾರೆ. ಇದು ಟ್ರೇಲರ್ ಗಿಂತ ಚಿಕ್ಕದಾಗಿರುತ್ತದೆ.

ಸಿನಿಮಾ ಅಥವಾ ಧಾರಾವಾಹಿಯ ಜಾಸ್ತಿ ವಿವರ ಟೀಸರ್ ನಲ್ಲಿ ಟ್ರೇಲರ್ ಅಷ್ಟು ಇರುವದಿಲ್ಲ.

ಟ್ರೇಲರ್ ಗಳನ್ನು ಸಿನಿಮಾ ಅಥವಾ ಧಾರಾವಾಹಿ ಬಿಡುಗಡೆಯ ದಿನಾಂಕ ತುಂಬಾ ಹತ್ತಿರ ಬಂದಾಗ ಬಿಡುಗಡೆ ಮಾಡುತ್ತಾರೆ. ಆದರೆ ಟೀಸರ್ ಗಳನ್ನು ಹಲವು ತಿಂಗಳು ಮುಂಚೆ ಸಾಮಾನ್ಯವಾಗಿ ಬಿಡುಗಡೆ ಮಾಡಲಾಗುತ್ತದೆ.

ಟೀಸರ್ ಗಳು ಸಾಮಾನ್ಯವಾಗಿ ಕಡಿಮೆ ಸಮಯದಾಗಿರುತ್ತದೆ. ಜನರಲ್ಲಿ ಕುತೂಹಲ ಕೆರಳಿಸುವದೇ ಅದರ ಉದ್ದೇಶ. 

ಟ್ರೇಲರ್ ಗಳು ಟೀಸರ್ ಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಸಮಯದಾಗಿದ್ದು ಚಿತ್ರದ ಬಗ್ಗೆ ತಿಳಿಸಿ ಪ್ರಚಾರ ಮಾಡುವದು ಅದರ ಉದ್ದೇಶ.

ಟೀಸರ್ ಜಾಹೀರಾತನ್ನು ಹೊಸ ಪ್ರಾಡಕ್ಟ್ ನ ಮುಖ್ಯ ಪ್ರೊಮೋಶನ್ ಆರಂಭಕ್ಕೆ ಮುನ್ನ ಆಸಕ್ತಿ ಕೆರಳಿಸಲು ಪ್ರಕಟಿಸಲಾಗುತ್ತದೆ. 

ಟೀಸರ್ ಟ್ರೇಲರ್ ಗಳನ್ನು ಸಿನಿಮಾ ಅಥವಾ ಧಾರಾವಾಹಿಯ ಮುಖ್ಯ ಟ್ರೇಲರ್ ಬಳಸಿ ಪ್ರಚಾರ ಮಾಡೋ ಮುಂಚೆ ಬಳಸಲಾಗುತ್ತದೆ. ಸಿನಿಮಾದ ಮುಖ್ಯ ಜನರ ಹುಟ್ಟಿದ ಹಬ್ಬ, ಬಿಡುಗಡೆ ದಿನಾಂಕ ಘೋಷಣೆ ಹೀಗೆ ಹಲವು ಕಾರಣಕ್ಕೆ ಬಿಡಲಾಗುತ್ತದೆ.

ಕಾಲಮಾನ

೧೩೫೦ ರಿಂದ ೧೪೦೦ರ ಕಾಲಮಾನದಲ್ಲಿ ಈ ಪದ ಇಂಗ್ಲೀಷ್ ಅಲ್ಲಿ ಬಳಕೆಗೆ ಬಂತು.

ಮೂಲ ಭಾಷೆ

ಇಂಗ್ಲಿಷ್

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಟೀಸರ್

ಹಿಂದಿ: ಟೀಸರ್

ಸಂಸ್ಕೃತ: 

Meaning in English

Teaser

हिंदी में अर्थ

टीसर

संस्कृत अर्थ

टीसर

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು