ಇಮ್ಮಡಿ (ಇಂಮಡಿ / ಇರ್ಮಡಿ)

ಇಮ್ಮಡಿ (ಇಂಮಡಿ / ಇರ್ಮಡಿ) ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ವಿಷಯ ಸೂಚಿ}

English: Immadi / Irmadi = Double, Two fold

हिंदी: इम्मडि / इर्मडि = दोगुना, दूसरा

संस्कृत: इम्मडि / इर्मडि =द्विगुणम्, द्वितीय

ಅರ್ಥ

ನಾಮಪದ:
ಎರಡನೆಯ 

ಗುಣ ವಿಶೇಷಣ ಪದ:
ದ್ವಿಗುಣ,  ಎರಡು ಪಟ್ಟು, ಡಬಲ್

ಕ್ರಿಯಾ ವಿಶೇಷಣ ಪದ:
ಎರಡು ಸಲ, ಎರಡು ಬಾರಿ, ಎರಡು ಸಂದರ್ಭಗಳಲ್ಲಿ

ಉತ್ಪತ್ತಿ

ಈರ್ ಅಥವಾ ಇರ್ ಎಂದರೆ ಕನ್ನಡದಲ್ಲಿ ಎರಡು ಎಂದರ್ಥ ಸೂಚಿಸುವ ಮೂಲ ಪದ. 

ಇರ್ ಪದ ಎರಡು ಅರ್ಥದಲ್ಲಿ ಬಳಸುವ ಇನ್ನೊಂದು ಉದಾಹರಣೆಗೆ ಇರುಮುಡಿ ಎಂಬ ಪದದ ಕಡೆ ನೋಡೋಣ. ಶಬರಿಮಲೆಗೆ ಹೋಗುವ ಭಕ್ತಾದಿಗಳು ಇರುಮುಡಿ ಗಂಟನ್ನು ತಲೆಮೇಲೆ ಹೊತ್ತಿರುತ್ತಾರೆ. ಇಲ್ಲಿ ಇರ್ ಎಂದರೆ ಎರಡು ಎಂದರ್ಥ. ಆ ಇರುಮುಡಿ ಗಂಟಲ್ಲಿ ಎರಡು ಭಾಗಗಳಿರುವದರಿಂದ ಅದಕ್ಕೆ ಹಾಗೆ ಕರೆಯುತ್ತಾರೆ. ಈರ್ ಅಂದರೂ ಎರಡೂ ಎಂದೇ ಅರ್ಥ. ಅದೇ ರೀತಿಯಲ್ಲಿ ಇರ್ಮಡಿ ಎಂದರೆ ಎರಡು ಪಟ್ಟು ಎಂಬರ್ಥ.

ಮಡಿ ಎಂದರೆ ಪಟ್ಟು ಎಂದರ್ಥ.

ಇರ್ + ಮಡಿ = ಇರ್ಮಡಿ
ಈರ್ + ಮಡಿ = ಈರ್ಮಡಿ
ಇಮ್ಮಡಿ ಹಾಗೂ ಇಂಮಡಿ ಪದಗಳು ಇರ್ಮಡಿ ಪದದ ಅಪಭೃಂಶ ಎನ್ನಬಹುದು.
ಇಮ್ + ಮಡಿ = ಇಮ್ಮಡಿ
ಇಂ + ಮಡಿ = ಇಂಮಡಿ

ಉಪಯೋಗ

ನಾಮಪದ: (ಎರಡನೆಯ)
ಇಮ್ಮಡಿ ಪುಲಕೇಶಿಯು ಒಬ್ಬ ಜನಪ್ರಿಯ ರಾಜ.
ಇಮ್ಮಡಿ ಬಿಜ್ಜಳನ ಬಗ್ಗೆ ನಿಮಗೆ ಏನು ಗೊತ್ತು?

ಗುಣ ವಿಶೇಷಣ ಪದ: (ದ್ವಿಗುಣ,  ಎರಡು ಪಟ್ಟು, ಡಬಲ್)
ಇಮ್ಮಡಿ ಲಾಭದ ಆಸೆ ತೋರಿಸಿ ಜನರಿಗೆ ಮೋಸ ಮಾಡಿದರು.
ಇರ್ಮಡಿ ಲಾಭದ ಆಸೆ ತೋರಿಸಿ ಜನರಿಗೆ ಮೋಸ ಮಾಡಿದರು.

ಕ್ರಿಯಾ ವಿಶೇಷಣ ಪದ: (ಎರಡು ಸಲ, ಎರಡು ಬಾರಿ, ಎರಡು ಸಂದರ್ಭಗಳಲ್ಲಿ)
ಆತ ಮಾಡಿದ ಒಳ್ಳೆಯ ಕೆಲಸದಿಂದ ಜನರ ಹರ್ಷ ಇಮ್ಮಡಿ ಆಯಿತು.
ಆತ ಮಾಡಿದ ಒಳ್ಳೆಯ ಕೆಲಸದಿಂದ ಜನರ ಹರ್ಷಇರ್ಮಡಿ ಆಯಿತು.

ಕ್ರಿಯಾಪದ:
ಆ ಸುದ್ಧಿ ಕೇಳಿ ನಮ್ಮ ಸಂತೋಷ ಇಮ್ಮಡಿಗೊಂಡಿತು.
ಆ ಸುದ್ಧಿ ಕೇಳಿ ನಮ್ಮ ಸಂತೋಷ ಇರ್ಮಡಿಗೊಂಡಿತು.

ವಿವರ

ಕನ್ನಡ ಅಂಕೆಗಳನ್ನು ಮೂಲ ಪದಗಳ ಅನುಸಾರ ಹೀಗೆ ಹೇಳಬಹುದು.

ಅಂಕೆ ಹಳೆ ಗನ್ನಡ ಹೊಸ ಕನ್ನಡ
ಒರ್ಒಂದು
ಈರ್ / ಇರ್ / ಇಪ್ಎರ್ಡು, ಎರಡು
ಮೂರ್ಮೂರು
ನಾಲ್ನಾಲ್ಕು
ಅಯ್ಅಯ್ದು, ಅಯಿದು, ಐದು
ಅರಅರು, ಆರು
ಎಪ್ / ಎಳ್ / ಏಳ್ಏಳು
ಎಣ್ಎಣ್ಟು, ಎಂಟು
ಒಮ್, ತೊಮ್ಒಮ್ಬತ್ತು, ಒಂಬತ್ತು
೧೦ಪತ್ತುಹತ್ತು

ಈ ಇರ್ ಪದವು ಹಲವು ಪದಗಳ ಮುಂಚೆ ಎರಡನೆಯದು, ಎರಡು ಪಟ್ಟು ಸೂಚಿಸಲು ಬಳಸಲಾಗುತ್ತದೆ.

ಇರ್ + ಮಡಿ = ಇರ್ಮಡಿ 

ಈ ಪದವು ಕಾಲಕ್ರಮೇಣ ಜನರ ಬಾಯಲ್ಲೀ ಇರ್ಮಡಿ ಪದವು ಇಮ್ಮಡಿ ಪದವಾಗಿ ಬದಲಾಗಿರುವ ಸಾಧ್ಯತೆ ಇದೆ. 

ಕಾಲಮಾನ

ಇದು ತುಂಬಾ ಹಳೆಯ ಕನ್ನಡ ಪದ.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

ದ್ವಿಗುಣ, ಎರಡನೆಯ, ಎರಡು ಪಟ್ಟು

ಇಮ್ಮಡಿ (ಇಂಮಡಿ / ಇರ್ಮಡಿ) - ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಡಬಲ್, ಟು ಫೋಲ್ಡ್, ಸೆಕಂಡ್
ಹಿಂದಿ: ದೋಗುನಾ, ದೂಸರಾ
ಸಂಸ್ಕೃತ: ದ್ವಿಗುಣಂ, ದ್ವಿತೀಯ

Immadi / Irmadi (Kannada) - Meaning in English

Double, Two fold, Second

इम्मडि / इर्मडि (कन्नड) - हिंदी में अर्थ

दोगुना, दूसरा

इम्मडि / इर्मडि (कन्नड) संस्कृत अर्थ

द्विगुणम्, द्वितीय
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು