ಕನ್ನಡ

ಕನ್ನಡ
ಪದಮಂಜರಿ.ಕಾಂ  

ಕನ್ನಡ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: 

English: Kannada (Kannada) = One of the South Indian language. It is also a Dravidian language.

हिंदी: कन्नड (कन्नड) = दक्षिण भारतीय भाषा

संस्कृत: कन्नड (कन्नड) = दक्षिण भारतीय भाषा

ಅರ್ಥ

ನಾಮಪದ:
ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾತನಾಡುವ ಒಂದು ದ್ರಾವಿಡ ಭಾಷೆ

ಉತ್ಪತ್ತಿ

ಕನ್ನಡ ಪದವು ಕರ್ಣಾಟ ಎಂಬ ಪದದ ಅಪಬೃಂಶ. ಕರ್ಣಾಟ ಪದದ ಮೂಲದ ಬಗ್ಗೆ ಸರಿಯಾದ ನಿರ್ಧಾರ ಇಲ್ಲ.

ಕರ್ಣಾಟ ಪದದ ಮೂಲದ ಬಗ್ಗೆ ಎರಡು ಮುಖ್ಯ ವಾದ ಏನೆಂದರೆ 

ವಾದ ೧:

ಕರ್ + ನಾಟ್ = ಕರ್ಣಾಟ

ಕರ್ ಎಂದರೆ ಕಪ್ಪು, ನಾಟ್ ಎಂದರೆ ನಾಡು ಈ ಪದದ ಮೂಲ ರೂಪ. ಕರಿನಾಡು ಎಂಬರ್ಥ. ಇಲ್ಲಿನ ಮಣ್ಣು ಕಪ್ಪು ಇದ್ದುದರಿಂದ ಈ ಹೆಸರು ಬಂತು ಎನ್ನುವ ವಾದ. 

ವಾದ ೨:

ಈ ಮೈಸೂರು ಅಕ್ಕ ಪಕ್ಕದ ಜನ ಆಡುವ ಮಾತು ಕಿವಿಯಲ್ಲಿ ಮೊಳಗಿದಂತೆ ಉತ್ತರ ಭಾರತದ ರಾಜ-ಜನರಿಗೆ ಅನ್ನಿಸಿ "ಕರ್ಣೇಷು ಅಟತಿ" ಎಂದು ಕರ್ಣಾಟ ಎಂದು ಕರೆದರು ಎಂದರು ಪ್ರತೀತಿ. ಕರ್ಣ ಎಂದರೆ ಸಂಸ್ಕೃತದಲ್ಲಿ ಕಿವಿ, ಅಟತಿ ಎಂದರೆ ಮೊಳಗುವದು.

ಇನ್ನೂ ಹಲವಾರು ವಾದಗಳಿವೆ. ಆದರೆ ಈ ಕರ್ಣಾಟ ಪದದ ನಿಜವಾದ ಮೂಲ ಉತ್ಪತ್ತಿ ಕಾರಣ ತಿಳಿದಿಲ್ಲ ಎನ್ನುವದೇ ಸೂಕ್ತ. 

ಆದರೆ ಈ ಪದ ಪುರಾತನ ಸಂಸ್ಕೃತ ಗ್ರಂಥಗಳಲ್ಲೂ ದಕ್ಷಿಣ ಭಾರತದ ಪ್ರದೇಶ ಉದ್ದೇಶಿಸಿ ಬಳಸಲಾಗಿದೆ.

ಕರ್ಣಾಟ ಎಂಬ ಪದ ಜನ ಆಡುತ್ತಾ ಆಡುತ್ತಾ ಕರ್ನಾಟ -> ಕನಾಡ -> ಕನ್ನಡ ಎಂಬ ರೂಪ ಪಡೆಯಿತು. ಎನ್ನ ಬಹುದು. 

ಕರ್ಣಾಟ ತತ್ಸಮ ಆದರೆ ಕನ್ನಡ ಪದ ಅದರ ತದ್ಭವ.

ಉಪಯೋಗ

ನಾಮಪದ:
  • ನಾವು ಕನ್ನಡಿಗರು ನಾವು ಆಡುವ ಭಾಷೆ ಕನ್ನಡ.

ವಿವರ

ಆದರೆ ಮೈಸೂರು, ಮಡಿಕೇರಿ ಅಕ್ಕ ಪಕ್ಕದ ಜಾಗ ಸೇರಿದ ಪ್ರದೇಶಕ್ಕೆ ಬಹಳ ಕಾಲದಿಂದಲೂ ಕರ್ಣಾಟ ದೇಶ ಎಂಬ ಹೆಸರಿತ್ತು. ಅಲ್ಲಿನ ಜನ ಆಡುವ ಭಾಷೆ ಕರ್ಣಾಟ. ಈ ಪದ ಕ್ರಮೇಣ ಕನ್ನಡ ರೂಪ ಪಡೆದುಕೊಂಡಿತು.

ವರಾಹ ಮಿಹಿರನ ಬೃಹತ್ ಸಂಹಿತ, ರಾಜತರಂಗಿಣಿ, ಕಥಾಸರಿತ್ಸಾಗರ ಇತ್ಯಾದಿ ಪುರಾತನ ಸಂಸ್ಕೃತ ಗ್ರಂಥಗಳಲ್ಲಿ ಕರ್ಣಾಟ ಎಂಬುದು ದಕ್ಷಿಣ ಭಾರತದ ಒಂದು ಪ್ರದೇಶ ಎಂಬಂತೆ ಉಲ್ಲೇಖಿಸಲಾಗಿದೆ.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ಕರ್ಣಾಟ

ಇದು ಇರುವ ಬೇರೆ ಪದಗಳು

ಕನ್ನಡ ನುಡಿ, ಕನ್ನಡ ಭಾಷೆ

ಆಧಾರಿತ ಪದಗಳು

ಕನ್ನಡಿಗ, ಕನ್ನಡಾಂಬೆ, ಕನ್ನಡತಿ, ಕನ್ನಡವಕ್ಕಿ, ಕನ್ನಡಿಗಿತಿ, ಕನ್ನಡಿಸು

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಎ ಸೌತ್ ಇಂಡಿಯನ್ ಲಾಂಗ್ವೇಜ್
ಹಿಂದಿ: ದಕ್ಷಿಣ ಭಾರತ ದ್ರಾವಿಡ ಭಾಷಾ
ಸಂಸ್ಕೃತ: ದಕ್ಷಿಣ ಭಾರತ ದ್ರಾವಿಡ ಭಾಷಾ

Kannada (Kannada) - Meaning in English

One of the South Indian language. It is also a Dravidian language.

कन्नड (कन्नड) - हिंदी में अर्थ

दक्षिण भारतीय भाषा

कन्नड (कन्नड) - संस्कृत अर्थ

दक्षिण भारतीय भाषा

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು