ನಿಪುಣ / ನಿಪುಣೆ

ನಿಪುಣ
ಪದಮಂಜರಿ.ಕಾಂ  

ನಿಪುಣ/ನಿಪುಣೆ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ನಿಪುಣ - ಚಾತುರ್ಯ ಉಳ್ಳವ, ಕೌಶಲ್ಯ ಉಳ್ಳವ, ನಿಷ್ಣಾತ, ಪಳಗಿದವ ನಿಪುಣೆ - ಚಾತುರ್ಯ ಉಳ್ಳವಳು, ಕೌಶಲ್ಯ ಉಳ್ಳವಳು, ನಿಷ್ಣಾತೆ, ಪಳಗಿದವಳು

English: Nipuna (Male) / Nipune (Female) (Kannada) = skilled in, clever, skillful, adroit, sharp, experienced, Smart

हिंदी: निपुण (पुल्लिंग) / निपुणे (स्त्रीलिंग)  (कन्नड) = निपुण / निपुणा

संस्कृत: निपुण (पुल्लिंग) / निपुणे (स्त्रीलिंग)  (कन्नड) = निपुण / निपुणा

ಅರ್ಥ

ನಾಮಪದ:
ನಿಪುಣ (ಪುಲ್ಲಿಂಗ) - ಚಾತುರ್ಯ ಉಳ್ಳವ, ಕೌಶಲ್ಯ ಉಳ್ಳವ, ನಿಷ್ಣಾತ, ಪರಿಣತ, ಪ್ರವೀಣ, ಪಳಗಿದವ, ಜಾಣ
ನಿಪುಣೆ (ಸ್ತ್ರೀಲಿಂಗ) - ಚಾತುರ್ಯ ಉಳ್ಳವಳು, ಕೌಶಲ್ಯ ಉಳ್ಳವಳು, ನಿಷ್ಣಾತೆ, ಪರಿಣತೆ, ಪ್ರವೀಣೆ, ಪಳಗಿದವಳು, ಜಾಣೆ

ಗುಣವಾಚಕ:
ನಿಪುಣ (ಪುಲ್ಲಿಂಗ) - ಚಾತುರ್ಯ ಉಳ್ಳ, ಕೌಶಲ್ಯ ಉಳ್ಳ, ನಿಷ್ಣಾತ
ನಿಪುಣೆ (ಸ್ತ್ರೀಲಿಂಗ) - ಚಾತುರ್ಯ ಉಳ್ಳ, ಕೌಶಲ್ಯ ಉಳ್ಳ, ನಿಷ್ಣಾತೆ

ಉತ್ಪತ್ತಿ

ನಿಪುಣ ಪದ ಸಂಸ್ಕೃತ ತತ್ಸಮ ಪದ ಆಗಿದೆ. ಇದು ಪುಲ್ಲಿಂಗ.
ಇನ್ನು ಸಂಸ್ಕೃತದಲ್ಲಿ ನಿಪುಣಾ ಎಂದರೆ ಸ್ತ್ರೀಲಿಂಗ ಪದ. ಆದರೆ ಕನ್ನಡದಲ್ಲಿ ಇದು ನಿಪುಣೆ ಎಂದಾಗಿದೆ. ನಿಪುಣೆ ತದ್ಭವ ಪದ.

ಉಪಯೋಗ

ನಾಮಪದ:

  • ಮಹೇಶನು ತುಂಬಾ ನಿಪುಣ. = ಮಹೇಶನು ತುಂಬಾ ಜಾಣ.
  • ಶ್ರೀವಲ್ಲೀ ತುಂಬಾ ನಿಪುಣೆ. = ಶ್ರೀವಲ್ಲೀ ತುಂಬಾ ಜಾಣೆ.

  • ನೀನು ತುಂಬಾ ನಿಪುಣೆ ಕಣಮ್ಮಾ. = ನೀನು ತುಂಬಾ ಜಾಣೆ ಕಣಮ್ಮಾ.
  • ನೀನು ತುಂಬಾ ನಿಪುಣ ಕಣಪ್ಪಾ. = ನೀನು ತುಂಬಾ ಜಾಣ ಕಣಪ್ಪಾ.

  • ಕಂಪ್ಯೂಟರ್ ತಂತ್ರಜ್ಞ ಸುಧೀರ್ ಅವರು ಗಣಕ ಶಾಸ್ತ್ರದಲ್ಲಿ ನಿಪುಣರು. (ಜಾಣರು / ಪ್ರವೀಣರು)

  • ಪ್ರಖ್ಯಾತ ತಬಲಾ ವಾದಕ ಗೀತ ಕುಮಾರರು ತುಂಬಾ ನಿಪುಣರು.  (ಜಾಣರು / ಪ್ರವೀಣರು) - ಗೌರವ ಸೂಚಕ

  • ನಾಟ್ಯ ವಿಶಾರದೆ ನಳಿನಿ ಅವರು ನಾಟ್ಯ ಶಾಸ್ತ್ರದಲ್ಲಿ ತುಂಬಾ ನಿಪುಣೆಯರು.  (ಜಾಣೆಯರು / ಪ್ರವೀಣೆಯರು) - ಗೌರವ ಸೂಚಕ

  • ನಮ್ಮ ಹತ್ತನೆ ತರಗತಿಯ ವಿದ್ಯಾರ್ಥಿನಿಯರು ತುಂಬಾ ನಿಪುಣೆಯರು. (ಜಾಣೆಯರು / ಪ್ರವೀಣೆಯರು) - ಬಹುವಚನ

ಗುಣವಾಚಕ:

  • ಚತುರಸಿಂಹ ಒಬ್ಬ ನಿಪುಣ ಬಡಗಿ. = ಚತುರಸಿಂಹ ಒಬ್ಬ ಜಾಣ ಬಡಗಿ.
  • ಅಂಬುಜ ಒಬ್ಬಳು ನಿಪುಣೆ ಟೇಲರ್. = ಅಂಬುಜ ಒಬ್ಬಳು ಜಾಣ ಟೇಲರ್.

ವಿವರ


ಚಿತ್ರಕೃಪೆ: Hunters Race ಇಂದ Unsplash

ಯಾರಾದರೂ ಯಾವುದೇ ಕೆಲಸದಲ್ಲಿ ಚಾತುರ್ಯದಿಂದ, ಜಾಣತನದಿಂದ ಮಾಡುತ್ತಿದ್ದು  ಉತ್ತಮ ಕೌಶಲ್ಯ ಹೊಂದಿದ್ದರೆ ನಿಪುಣ / ನಿಪುಣೆ ಎನ್ನಬಹುದು.

ನೆನಪಿಡಿ ಒಬ್ಬ ಸಾದಾರಣ ಕೆಲಸಗಾರನಿಗೆ ಈ ಪದ ಬಳಸಲಾಗದು. ಆತ ವೈಶಿಷ್ಟ್ಯ ಪೂರ್ಣ ನಾಗಿರ ಬೇಕು. ಆತನ ಕೆಲಸದಲ್ಲಿ ಜಾಣತನ, ನಾಜೂಕುತನ, ಸೂಕ್ಷ್ಮ ವಿಚಾರಗಳಿಗೂ ಗಮನವಿಟ್ಟು ನಿರ್ವಹಿಸುವ ಸಾಮರ್ಥ್ಯ ಇರಬೇಕು.

ನಿಪುಣ ಇದು ಹುಡುಗರು / ಗಂಡಸರ ಉದ್ದೇಶಿಸಿ ಹೇಳುವ ಪದ. ನಿಪುಣೆ ಇದು ಹುಡುಗಿಯರು / ಹೆಂಗಸರ ಉದ್ದೇಶಿಸಿ ಬಳಸುವ ಪದ. 

ಒಬ್ಬ ನಿಪುಣ ಕೆಲಸಗಾರ ಅಥವಾ ಒಬ್ಬಳು ನಿಪುಣೆ ಕೆಲಸಗಾರ್ತಿ ಎಂದರೆ ಆ ಕೆಲಸದಲ್ಲಿ ಪಳಗಿದವಳು ಎಂದರ್ಥ.

ಹಾಗೆಯೇ ನಿಪುಣರು / ನಿಪುಣೆಯರು  ಇವು ಗೌರವ ಸೂಚಕ / ಬಹುವಚನ ಪದಗಳಾಗಿದೆ.

ಕಾಲಮಾನ

ಇವು ಹಳೆಯ ಕಾಲದ ಸಂಸ್ಕೃತ ಪದಗಳಾಗಿವೆ.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ನಿಷ್ಣಾತ, ಪ್ರವೀಣ, ಚತುರ, ಸ್ಮಾರ್ಟ್, ಜಾಣ
ನಿಷ್ಣಾತೆ, ಪ್ರವೀಣೆ, ಚತುರೆ, ಸ್ಮಾರ್ಟ್, ಜಾಣೆ

ಏಕ ವಚನ / ಬಹು ವಚನ

ನಿಪುಣ ಇದು ಏಕ ವಚನ. ನಿಪುಣರು ಎಂಬುದು ಬಹು ವಚನ ಹಾಗೂ ಗೌರವ ಸೂಚಕ. ತುಂಬಾ ಹಿರಿಯರಿಗೆ ಗೌರವ ಪೂರ್ಣವಾಗಿ ನಿಪುಣರು ಎನ್ನುವದು ವಾಡಿಕೆ(ರೂಢಿ).

ಲಿಂಗ

ನಿಪುಣ ಪುಲ್ಲಿಂಗ. ನಿಪುಣೆ ಸ್ತ್ರೀಲಿಂಗ. ಗಂಡಸರು ಹಾಗೂ ಹುಡುಗರಿಗೆ ನಿಪುಣರೆಂದು ಬಳಸಿದರೆ ಹುಡುಗಿಯರು ಹಾಗೂ ಹೆಂಗಸರನ್ನು ಉದ್ದೇಶಿಸಿ ಹೇಳುವಾಗ ನಿಪುಣೆಯರೆಂದು ಬಳಸುತ್ತಾರೆ.

ಆಧಾರಿತ ಪದಗಳು

ನೈಪುಣ್ಯತೆ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಶಾರ್ಪ್, ಕ್ಲೆವರ್, ಸ್ಕಿಲ್ ಫುಲ್, ಸ್ಮಾರ್ಟ್
ಹಿಂದಿ: ನಿಪುಣ್
ಸಂಸ್ಕೃತ: ನಿಪುಣ / ನಿಪುಣಾ

Nipuna (Male) / Nipune (Female) (Kannada) - Meaning in English

skilled in, clever, skillful, adroit,  sharp, experienced, Smart

निपुण (पुल्लिंग) / निपुणे (स्त्रीलिंग) (कन्नड) - हिंदी में अर्थ

निपुण = निपुण
निपुणे = निपुणा

निपुण (पुल्लिंग) / निपुणे (स्त्रीलिंग)  (कन्नड) - संस्कृत अर्थ

निपुण = निपुण
निपुणे = निपुणा

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು