ಅಪ್ಪಟ

ಅಪ್ಪಟ
ಪದಮಂಜರಿ.ಕಾಂ  

ಅಪ್ಪಟ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ:  ಶುದ್ಧ, ಚೊಕ್ಕ, ಕಲಬೆರಕೆ ಇಲ್ಲದ, ಪರಿಶುದ್ಧವಾದ, ಇಡೀ, ಸಂಪೂರ್ಣ, ನಿಜವಾದ, ಒರಿಜಿನಲ್

English:  Appata (Kannada) = Pure, Unmixed, whole, entire, Real, Original

हिंदी: अप्पट (कन्नड) = शुद्ध, निर्दोष, अमिश्रित, असली, निर्मल, पुरे   

संस्कृत: अप्पट (कन्नड) = शुद्ध, निर्दोष, अमिश्रित,  निर्मल, संपूर्ण

ಅರ್ಥ

ಗುಣವಾಚಕ:

 ಶುದ್ಧ, ಚೊಕ್ಕ, ಕಲಬೆರಕೆ ಇಲ್ಲದ, ಪರಿಶುದ್ಧವಾದ, ನಿಜವಾದ, ಇಡೀ, ಸಂಪೂರ್ಣ, ಅಪೂಟ

ಉಪಯೋಗ

ಗುಣವಾಚಕ: (ಶುದ್ಧ, ಚೊಕ್ಕ, ಕಲಬೆರಕೆ ಇಲ್ಲದ, ಪರಿಶುದ್ಧವಾದ)

  • ಆ ನಾಣ್ಯ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.
  • ಆ ಹೋಟೆಲ್ ಅಲ್ಲಿ ಅಪ್ಪಟ ಬೆಣ್ಣೆ ಹಾಕಿ ಮಾಡಿದ ದೋಸೆ ಸಿಗುತ್ತದೆ.

ಗುಣವಾಚಕ: (ನಿಜವಾದ, ಒರಿಜಿನಲ್)

  • ಆತನು ಜನಪ್ರಿಯ ನಟನ ಅಪ್ಪಟ ಅಭಿಮಾನಿ.
  • ಅವನು ಅಪ್ಪಟ ಕನ್ನಡಿಗ.

  • ಇದು ಅಪ್ಪಟ ಎಪಲ್ ಐಫೋನ್ ಆಗಿದೆ ಏನೂ ಮೋಸ ಇಲ್ಲ.

  • ಅಪ್ಪಟ ಗ್ರಾಮೀಣ ಪ್ರತಿಭೆಯಾದ ಸುಂದರಿ ದೇಶ ಮಟ್ಟದಲ್ಲಿ ಹೆಸರು ಮಾಡಿದಳು. 
  • ಅವಳು ಅಪ್ಪಟ ಸ್ವಾಭಿಮಾನಿ.

ಗುಣವಾಚಕ: (ಇಡೀ, ಸಂಪೂರ್ಣ)

  • ರಣಧೀರನ ವಿಚಾರದಲ್ಲಿ ಆ ಮಾತು ಅಪ್ಪಟ ಸತ್ಯ ಆಗಿತ್ತು.
  • ರಾಜಕಾರಣಿ ಮಾಡಿದ ಭಾಷಣದ ಪ್ರತಿ ಸಾಲೂ ಅಪ್ಪಟ ನಿಜ ಅದರಲ್ಲಿ ಒಂದೂ ಸುಳ್ಳು ಹೇಳಿಕೆ ಇಲ್ಲ.
  • ಪತ್ರಿಕೆಯಲ್ಲಿ ಬಂದ ಆ ಸುದ್ಧಿ ಅಪ್ಪಟ ಸುಳ್ಳು ಎಂದು ಗ್ರಾಮ ಲೆಕ್ಕಿಗರು ತಿಳಿಸಿದರು.
  • ಇಂದು ಬಿಡುಗಡೆ ಆದ "ಕೆಂಬೂತ" ಚಿತ್ರ ಅಪ್ಪಟ ಕಾಮಿಡಿ ಚಿತ್ರ ಎಂದು ನಿರ್ಮಾಪಕರು ತಿಳಿಸಿದರು.

ವಿವರ

ಅಪೂಟ ಎಂದರೆ ಪೂರ್ತಿ, ಎಲ್ಲ, ಸಂಪೂರ್ಣ ಎಂದರ್ಥ. ಅಪ್ಪಟ ಎಂದರೂ ಅದೇ ಅರ್ಥ. ಬಳಸುವಾಗ ಅಪ್ಪಟ ಪದ ವನ್ನು ವಿವಿಧ ಅರ್ಥ ಮೂಡುವಂತೆ ಬಳಸಲಾಗುತ್ತದೆ. ಅದರ ಉಪಯೋಗದ ಪ್ರಕಾರ ಬೇರೆ ಬೇರೆ ಅರ್ಥ ಮೂಡಿಸುತ್ತದೆ.

ಅಪ್ಪಟ ಬೆಣ್ಣೆ, ಅಪ್ಪಟ ಚಿನ್ನ ಎಂದರೆ ಬೇರೆನೂ ಸೇರಿಸದ ಪೂರ್ತಿ ಬೆಣ್ಣೆ, ಯಾವುದೇ ಮಿಶ್ರಣ, ಕಲಬೆರಕೆ ಇಲ್ಲದ ಸಂಪೂರ್ಣ ಚಿನ್ನ ಎಂಬರ್ಥದಲ್ಲಿ ಬಳಸಲಾಗುತ್ತದೆ. ಅಂದರೆ ಶುದ್ಧ,  ಚೊಕ್ಕ ಎಂಬರ್ಥ ನೀಡುತ್ತದೆ.

ಅದೇ ಅಪ್ಪಟ ಅಭಿಮಾನಿ, ಅಪ್ಪಟ ದೇಶ ಭಕ್ತ, ಅಪ್ಪಟ ಕನ್ನಡತಿ ಎಂದರೆ ನಿಜವಾದ ಅಭಿಮಾನಿ, ನಿಜವಾದ ದೇಶ ಭಕ್ತ, ನಿಜವಾದ ಕನ್ನಡತಿ ಎಂಬರ್ಥ ನೀಡುತ್ತದೆ.

ಅಪ್ಪಟ ಸುಳ್ಳು, ಅಪ್ಪಟ ಸತ್ಯ ಎಂದರೆ ಎಲ್ಲವೂ ಸುಳ್ಳು, ಸಂಪೂರ್ಣ ಸತ್ಯ ಎಂಬರ್ಥ ನೀಡುತ್ತೆ.

ಇದೇ ಪದ ಅಪ್ಪಟ, ಅಪ್ಟ, ಅಪೂಟ, ಆಪ್ಟ ಎಂಬ ರೂಪದಲ್ಲಿ ಬಾಯಿ ಮಾತಲ್ಲಿ ಉಚ್ಚರಿಸುತ್ತಾರೆ. ಅಪೂಟ ಎಂದು ಅನೇಕರು ಬರೆಯುವಾಗ ಸಹ ಬಳಸುತ್ತಾರೆ.

ಅಂದ್ರೆ ಅಪೂಟ ಸತ್ಯ, ಅಪೂಟ ಸುಳ್ಳು ಹೀಗೂ ಬಳಸಬಹುದು.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

ಶುದ್ಧ, ಚೊಕ್ಕ, ಇಡೀ, ಸಂಪೂರ್ಣ, ಅಪೂಟ

ವಿರುದ್ಧ ಅರ್ಥದ ಪದಗಳು

ಕಲುಷಿತ, ಅಶುದ್ದ

ಇದು ಇರುವ ಬೇರೆ ಪದಗಳು

ಅಪ್ಪಟ ಅಪರಂಜಿ, ಅಪ್ಪಟ ಚಿನ್ನ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಪ್ಯೂರ್, ಅನ್ ಮಿಕ್ಸ್ಡ್, ಹೋಲ್, ಎಂಟೈರ್, ರಿಯಲ್
ಹಿಂದಿ: ಶುದ್ಧ, ನಿರ್ದೋಷ, ಅಮಿಶ್ರಿತ, ಅಸಲೀ, ನಿರ್ಮಲ್, ಪೂರೆ
ಸಂಸ್ಕೃತ: ಶುದ್ಧ, ನಿರ್ದೋಷ, ಅಮಿಶ್ರಿತ, ನಿರ್ಮಲ್

Appata (Kannada) - Meaning in English

Pure, Unmixed, whole, entire, Real, Original

अप्पट (कन्नड) - हिंदी में अर्थ

शुद्ध, निर्दोष, अमिश्रित, असली, निर्मल, पूरे  

अप्पट (कन्नड) - संस्कृत अर्थ

शुद्ध, निर्दोष, अमिश्रित,  निर्मल, संपूर्ण

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು