ರಾಸು

ರಾಸು
ಪದಮಂಜರಿ.ಕಾಂ  

ರಾಸು ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಹಸು, ಎತ್ತು, ದನ, ಜಾನುವಾರು, ಎಮ್ಮೆ, ಕೋಣ

English: Raasu (Kannada) = cattle

हिंदी: रासु (कन्नड) = मवेशी, गाय, बैल, पशु

संस्कृत: रासु (कन्नड) = पशु

ಅರ್ಥ

ನಾಮಪದ:

ಹಸು, ಎತ್ತು, ದನ, ಎಮ್ಮೆ, ಕೋಣ, ಮಣಕ, ಜಾನುವಾರು

ಉಪಯೋಗ

ನಾಮಪದ:

  • ಉತ್ತಮ ತಳಿಯ ರಾಸುಗಳು ಸಂತೆಯಲ್ಲಿ ಸಿಗುತ್ತವೆ.
  • ಕೊಟ್ಟಿಗೆಯಿಂದ ಕಾಣೆಯಾದ ರಾಸು.
  • ಹಬ್ಬಕ್ಕೆ ರೈತರು ರಾಸು ಪೂಜೆ ಮಾಡುತ್ತಾರೆ.

ವಿವರ


ಚಿತ್ರಕೃಪೆ: Monika Kubala ಇಂದ Unsplash

ಎಮ್ಮೆ, ಕೋಣ, ಎತ್ತು ಹಾಗೂ ಹಸು ಇವೆಲ್ಲವೂ ರಾಸುಗಳು. ಒಟ್ಟಿನಲ್ಲಿ ಹಾಲು ಕೊಡುವ ಅಥವಾ ಚಕ್ಕಡಿ ಬಂಡಿ ಎಳೆಯಲು ಬಳಸುವ ಕೊಂಬಿರುವ ದೊಡ್ಡ ಪ್ರಾಣಿಗಳು, ಜಾನುವಾರುಗಳು ಎನ್ನಬಹುದು.

ಮಣಕ ಅಂದರೆ ಚಿಕ್ಕ ಕರುಗಳು ಕೂಡಾ ರಾಸುಗಳೇ.

ಕುರಿ, ಮೇಕೆಗಳಂತಹ ಚಿಕ್ಕ ಪ್ರಾಣಿಗಳು ರಾಸುಗಳಲ್ಲ.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

ಜಾನುವಾರು

ಏಕ ವಚನ / ಬಹು ವಚನ

ರಾಸು ಪದ ಏಕವಚನ ಅಂದ್ರೆ ಒಂದು ಜಾನುವಾರು ಉದ್ದೇಶಿಸಿ ಬಳಸುವಂತಹ ಪದ. ಹಲವು ಜಾನುವಾರುಗಳಿಗೆ / ಹಸುಗಳಿಗೆ / ಎತ್ತುಗಳಿಗೆ ರಾಸುಗಳು ಎಂಬ ಬಹುವಚನ ಪದ ಬಳಸಬೇಕು.

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಕ್ಯಾಟಲ್
ಹಿಂದಿ: ಮವೇಶಿ, ಗಾಯ್, ಬೈಲ್, ಪಶು
ಸಂಸ್ಕೃತ: ಪಶು

Raasu (Kannada) - Meaning in English

Cattle

रासु (कन्नड) - हिंदी में अर्थ

मवेशी, गाय, बैल, पशु

रासु (कन्नड) - संस्कृत अर्थ

पशु

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು