ವಿಹಂಗಮ

ವಿಹಂಗಮ
ಪದಮಂಜರಿ.ಕಾಂ  

ವಿಹಂಗಮ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಪಕ್ಷಿ, ಹಕ್ಕಿ, ಆಕಾಶದಲ್ಲಿ ಹಾರುವ, ವಿಹಗ, ಮೇಲ್ನೋಟಕ್ಕೆ ಕಾಣುವ,  ಎಲ್ಲವನ್ನೂ ಸಂಕ್ಷಿಪ್ತವಾಗಿ ಹಿಡಿದಿಡುವ, ಹಕ್ಕಿಗೆ ಆಕಾಶದಿಂದ ಕಾಣುವ ಹಾಗೆ, ಎತ್ತರದ ಜಾಗದಿಂದ, ಪನೋರಾಮಿಕ್

English: vihangama (Kannada) = Bird, Panoramic, Overview

हिंदी: विहंगम (कन्नड) = पक्षी, चिड़िया, पंछी, परिन्दा, संक्षिप्त विवरण, विहंगावलोकन

संस्कृत: विहंगम (कन्नड) = विहङ्गम, पक्षी, खग, विहग, शकुन्त

ಅರ್ಥ

ನಾಮಪದ:
ಪಕ್ಷಿ, ಹಕ್ಕಿ, ಆಕಾಶದಲ್ಲಿ ಹಾರುವ, ವಿಹಗ

ಗುಣವಾಚಕ:
ಮೇಲ್ನೋಟಕ್ಕೆ ಕಾಣುವ, ಸಾರಾಂಶ, ಎಲ್ಲವನ್ನೂ ಸಂಕ್ಷಿಪ್ತವಾಗಿ  ಹಿಡಿದಿಡುವ, ಹಕ್ಕಿಗೆ ಆಕಾಶದಿಂದ ಕಾಣುವ ಹಾಗೆ, ಎತ್ತರದ ಜಾಗದಿಂದ, ಪನೋರಾಮಿಕ್

ಉತ್ಪತ್ತಿ

ವಿಹಂಗಮ ಇದು ಸಂಸ್ಕೃತ ಮೂಲ ಪದ, ಅಂದರೆ ತತ್ಸಮ ಪದ ಆಗಿದೆ. ಸಂಸ್ಕೃತದಲ್ಲಿ  विहङ्गम(ವಿಹಂಗಮ) ಎಂದರೆ ಇದೇ ಅರ್ಥ ಇದೆ.

ಉಪಯೋಗ

ನಾಮಪದ:

  • ನಾನು ಹಾಕಿದ ಕಾಳುಗಳನ್ನು ತಿನ್ನಲು ವಿಹಂಗಮಗಳು ಬಂದವು.
  • ನಾನು ವಿಹಂಗಮಗಳಂತೆ ಗಾಳಿಯಲ್ಲಿ ತೇಲಿದೆ.

ಗುಣವಾಚಕ: 

  • ಬನ್ನಿ ಕೊಡಚಾದ್ರಿ ಬೆಟ್ಟದ ವಿಹಂಗಮ ನೋಟ ನೋಡೋಣ. = ಬನ್ನಿ ಕೊಡಚಾದ್ರಿ ಬೆಟ್ಟದ ಪಕ್ಷಿ ನೋಟ ನೋಡೋಣ.
  • ಕರ್ನಾಟಕದ ಕೊಡಗಿನ ಇತಿಹಾಸದ ವಿಹಂಗಮ ನೋಟ ಇಲ್ಲಿದೆ.

  • ಜೈಪುರಕ್ಕೆ ಹೋದಾಗ ಆ ಇಡೀ ಊರಿನ ವಿಹಂಗಮ ವೀಕ್ಷಣೆಯನ್ನು ಹತ್ತಿರದ ಗುಡ್ಡದಿಂದ ಮಾಡಿದೆ.

ವಿವರ


ಚಿತ್ರಕೃಪೆ: Alistair Dent on Unsplash

ವಿಹ ಅಥವಾ ವಿಹಾ ಎಂದರೆ ಆಕಾಶ ಅಥವಾ ಗಾಳಿಯಲ್ಲಿ ಎಂದರ್ಥ. ಇದು ಕೂಡಾ ತತ್ಸಮ ಪದ. 
ಇನ್ನು ಗಮ ಎಂದರೆ ಹೋಗುವದು ಎಂದರ್ಥ.

ವಿಹ + ಗಮ = ವಿಹಂಗಮ

ವಿಹಂಗಮ ಎಂದರೆ ಆಕಾಶದಲ್ಲಿ ಹೋಗುವ ಅಥವಾ ಗಾಳಿಯಲ್ಲಿ ಹೋಗುವ ಅರ್ಥ ಬರುತ್ತೆ.

ಆಕಾಶದಲ್ಲಿ ಹೋಗುವ ಸಾಮರ್ಥ್ಯ ಇರುವ ಜೀವಿ ಯಾವುದು? ಹಕ್ಕಿ, ಪಕ್ಷಿ ಅಲ್ವಾ? ಅದಕ್ಕೆ ಹಕ್ಕಿಗೆ ವಿಹಂಗಮ ಎಂದು ಕರೆಯುತ್ತಾರೆ.

ಚಿತ್ರಕೃಪೆ: Petar Avramoski on Unsplash

ವಿಹಂಗಮ ನೋಟ ಎಂದರೆ ಪಕ್ಷಿ ನೋಟ. ಪಕ್ಷಿ ತರಹ ಆಕಾಶದಲ್ಲಿ ಹಾರುತ್ತಾ ಕೆಳಗೆ ಭೂಮಿ ಕಡೆ ನೋಡಿದರೆ ಭೂಮಿಯ ಆ ಜಾಗದಲ್ಲಿ ನ ಮೇಲ್ನೋಟ ಮಾತ್ರ ಕಾಣಿಸುತ್ತದೆ. ಆದರೆ ತುಂಬಾ ವಿವರವಾದ ಮಾಹಿತಿ ಇರುವದಿಲ್ಲ. ಇದಕ್ಕೆ ಸಮೀಕರಿಸಿ ಒಂದು ವಿಷಯದ ಸಾರಾಂಶಕ್ಕೆ ಅಥವಾ ಒಂದು ಜಾಗದ ಮೇಲ್ನೋಟದ ಮಾಹಿತಿಗಳಿಗೆ ವಿಹಂಗಮ ನೋಟ ಎನ್ನುತ್ತಾರೆ.

ಒಟ್ಟಿನಲ್ಲಿ ವಿಹಂಗಮವನ್ನು ಸಮಗ್ರ ಆದರೆ ಜಾಸ್ತಿ ವಿವರ ಇರದ, ಎಲ್ಲವನ್ನೂ ಕೇವಲ ಮೇಲ್ನೋಟಕ್ಕೆ ಕಾಣುವ ಮಾಹಿತಿ ಮಾತ್ರ ನೀಡುವ, ಪನೊರಾಮಿಕ್ ಎಂಬರ್ಥ ನೀಡುವ ಗುಣವಾಚಕ ಆಗಿ ಬಳಸ ಬಹುದು.

  • ವಿಹಂಗಮ ದೃಷ್ಟಿ - ಮೇಲ್ನೋಟದಲ್ಲಿ ನೋಡುವ
  • ವಿಹಂಗಮ ಚಿತ್ರ - ಇಡೀ ಪ್ರದೇಶವನ್ನು ದೂರದಿಂದ ತೋರಿಸುವ
  • ವಿಹಂಗಮ ವೀಕ್ಷಣೆ - ಎಲ್ಲವನ್ನು ನೋಡುವದು ಆದರೆ ಯಾವುದನ್ನು ತೀರಾ ವಿವರವಾಗಿ ನೋಡದಿರುವದು, ಎತ್ತರದ ಜಾಗದಿಂದ ಒಂದು ಪ್ರದೇಶವನ್ನು ಸಮಗ್ರವಾಗಿ ನೋಡುವದು
  • ವಿಹಂಗಮ ದೃಶ್ಯ - ದೂರದಿಂದ ಎಲ್ಲವನ್ನು ತೋರಿಸುವ ದೃಶ್ಯ
  • ವಿಹಂಗಮ ಯಾನ - ಆಕಾಶದಲ್ಲಿ ಪಕ್ಷಿಯಂತೆ ಸಾಗುವದು

ಕಾಲಮಾನ

ಇದು ಹಳೆಯ ಕಾಲದ ಸಂಸ್ಕೃತ ಪದ.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ಪಕ್ಷಿ, ಹಕ್ಕಿ, ವಿಹಗ

ಏಕ ವಚನ / ಬಹು ವಚನ

ವಿಹಂಗಮ ಇದು ಏಕ ವಚನ. ವಿಹಂಗಮಗಳು ಇದು ಬಹು ವಚನ.

ಇದು ಇರುವ ಬೇರೆ ಪದಗಳು

ವಿಹಂಗಮ ನೋಟ, ವಿಹಂಗಮ ದೃಷ್ಟಿ, ವಿಹಂಗಮ ಚಿತ್ರ, ವಿಹಂಗಮ ವೀಕ್ಷಣೆ, ವಿಹಂಗಮ ದೃಶ್ಯ, ವಿಹಂಗಮ ಯಾನ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಬರ್ಡ್, ಪನೋರಾಮಿಕ್, ಒವರ್ ವೀವ್
ಹಿಂದಿ: ಪಕ್ಷೀ, ಚಿಡಿಯಾ, ಪಂಚಿ, ಪರಿಂದಾ, ಸಂಕ್ಷಿಪ್ತ ವಿವರಣ್, ವಿಹಂಗಾವಲೋಕನ್
ಸಂಸ್ಕೃತ: ವಿಹಂಗಮ, ಪಕ್ಷೀ, ಖಗ, ವಿಹಗ, ಶಕುಂತ, ವಿಹಂಗಾವಲೋಕನ

Vihangama (Kannada) Meaning in English

Bird, Panoramic, Overview

विहंगम (कन्नड) - हिंदी में अर्थ

पक्षी, चिड़िया, पंछी, परिन्दा, संक्षिप्त विवरण, विहंगावलोकन

विहंगम (कन्नड) - संस्कृत अर्थ

विहङ्गम, पक्षी, खग, विहग, शकुन्त, विहंगावलोकन

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು