ಎಸಳು / ಯಸಳು / ಎಸಳ್ / ಎಸೞ್

ಎಸಳು
ಪದಮಂಜರಿ.ಕಾಂ  

ಎಸಳು / ಎಸಳ್ / ಯಸಳು / ಎಸೞ್ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಹೂವಿನ ದಳ, ಪಕಳೆ, ದಲ, ದಳ, ರೇಕು, ಯಾವುದೋ ಒಂದರ ಒಂದು ಭಾಗ, ಶಾಖೆ ಅಥವಾ ಕೊಂಬೆ

English: Esalu (Kannada) = Petal, A part of something

हिंदी: एसळु (कन्नड) = पंखुड़ी, पेटल

संस्कृत: एसळु (कन्नड) = पुष्पदलं

ಅರ್ಥ


ಚಿತ್ರಕೃಪೆ: Andreas Haslinger on Unsplash

ನಾಮಪದ ೧:

ಹೂವಿನ ಬಣ್ಣ ಬಣ್ಣದ ದಳ, ಹೂವಿನ ಪಕಳೆ, ರೇಕು, ದಲ

ನಾಮಪದ ೨:

ಯಾವುದೋ ಒಂದರ ಒಂದು ಭಾಗ, ಶಾಖೆ ಅಥವಾ ಕೊಂಬೆ

ಉತ್ಪತ್ತಿ

ಎಸೞ್ ಎಂಬ ಹಳಗನ್ನಡ ಪದದಿಂದ ಎಸಳು ಪದ ಆಗಿದೆ.

ಉಪಯೋಗ

ನಾಮಪದ ೧: (ಹೂವಿನ ಬಣ್ಣ ಬಣ್ಣದ ದಳ, ಹೂವಿನ ಪಕಳೆ, ರೇಕು, ದಲ)

  • ಗುಲಾಬಿ ಅತ್ತರನ್ನು ಮಾಡಲು ಗುಲಾಬಿ ಹೂವಿನ ಎಸಳು ಬಳಸುತ್ತಾರೆ.
  • ತಾವರೆ ಹೂವಿನ ಎಸಳುಗಳು ನಿಧಾನಕ್ಕೆ ಅರಳಿತು.

ನಾಮಪದ ೨: (ಯಾವುದೋ ಒಂದರ ಒಂದು ಭಾಗ, ಶಾಖೆ ಅಥವಾ ಕೊಂಬೆ)

  • ಅಡುಗೆಗೆ ಒಂದು ಎಸಳು ಬೆಳ್ಳುಳ್ಳಿಯನ್ನು ನುರಿದು ಹಾಕಿ.
  • ವಾಲ್ಮೀಕಿ ರಾಮಾಯಣ ಮಹಾನ್ ಗ್ರಂಥದ ಒಂದು ಎಸಳು ನಿಮಗಾಗಿ.

ವಿವರ

ಎಸಳ್ ಎಂದರೆ ಒಂದು ಹೂವಿನ ಪಕಳೆ. ಬಣ್ಣ ಬಣ್ಣದ ಈ ಹೂವಿನ ದಳವನ್ನು ಎಸಳು ಎನ್ನುತ್ತಾರೆ. ಇದರ ಮೂಲರೂಪ ಹಳೆಗನ್ನಡದ ಎಸೞ್ ಪದ. ಕ್ರಮೇಣ ಇದು ಎಸಳ್, ಎಸಳು, ಯಸಳು, ಎಸ್ಳು, ಯಸ್ಳು ಎಂಬ ರೂಪದಲ್ಲಿ ಆಡು ಭಾಷೆಯಲ್ಲಿ ಬಳಕೆ ಆಗುತ್ತಿದೆ.

ಬೆಳ್ಳುಳ್ಳಿಯನ್ನು ಒಡೆದಾಗ ಬರುವ ಭಾಗಗಳಿಗೆ ಸಹ ಎಸಳು ಎನ್ನುವದು ರೂಢಿ.

ಒಂದು ಹೂವಿನ ಹಲವು ಎಸಳುಗಳ ಮಧ್ಯೆ ಒಂದನ್ನು ಆಯ್ದಂತೆ ಎಂಬ ಹೋಲಿಕೆಯಲ್ಲಿ ಇದನ್ನು ಒಂದು ಭಾಗ, ಕೊಂಬೆ, ಬ್ರ್ಯಾಂಚ್, ಸಂಚಿಕೆ ಅನ್ನುವ ಅರ್ಥದಲ್ಲೂ ಬಳಸುತ್ತಾರೆ.

ಉದಾಹರಣೆಗೆ ಒಂದು ಪುಸ್ತಕ, ಗ್ರಂಥ ಅಥವಾ ಕಾದಂಬರಿಯ ಎಸಳು ಎಂದರೆ ಆ ಪುಸ್ತಕದ ಒಂದು ಆಯ್ದ ಭಾಗ ಎಂದರ್ಥ.

ಉದಾಹರಣೆಗೆ, ಮಹಾನ್ ನಾಟಕಕಾರ ಧಿರೇಂದ್ರ ಅವರ ಜೀವನ ಕಥೆಯ ಪುಸ್ತಕದ ಒಂದು ಎಸಳು ನಿಮಗಾಗಿ. ಅಂದರೆ ಆ ಜೀವನ ಕಥೆಯ ಒಂದು ಆಯ್ದ ಭಾಗ ನಿಮಗಾಗಿ ಎಂದರ್ಥ.

ಕಾಲಮಾನ

ಇದು ಹಳೆಗನ್ನಡ ಕಾಲದ ಪದ.

ಮೂಲ ಭಾಷೆ

ಕನ್ನಡ

ಇದೇ ಅರ್ಥದ ಪದಗಳು

ಪಕಳೆ, ದಳ, ದಲ, ರೇಕು

ಏಕ ವಚನ / ಬಹು ವಚನ

ಎಸಳು ಇದು ಏಕವಚನ ಪದ. ಒಂದೇ ಹೂವಿನ ದಳ ಸೂಚಿಸುತ್ತದೆ.
ಎಸಳುಗಳು ಇದು ಬಹುವಚನ ಪದ. ಹಲವು ಹೂವಿನ ದಳ ಸೂಚಿಸುತ್ತದೆ.

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಪೆಟಲ್
ಹಿಂದಿ: ಪಂಖುಡಿ, ಪೆಟಲ್
ಸಂಸ್ಕೃತ: ಪುಷ್ಪದಲಂ

Esalu (Kannada) - Meaning in English

Petal, A part of something

एसळु (कन्नड) - हिंदी में अर्थ

पंखुड़ी, पेटल

एसळु (कन्नड) - संस्कृत अर्थ

पुष्पदलं

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು