ಕಾಲಹರಣ

ಕಾಲಹರಣ
ಪದಮಂಜರಿ.ಕಾಂ  

ಕಾಲಹರಣ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಹೊತ್ತು ಕಳೆಯುವದು, ಸಮಯ ಹಾಳು ಮಾಡುವದು, ಕಾಲ ಕ್ಷೇಪ, ಟೈಂ ಪಾಸ್, ಸಮಯ ವ್ಯರ್ಥ ಮಾಡುವದು, ತಡ ಮಾಡುವದು, ದಿನ ಮುಂದೆ ಹಾಕುತ್ತಾ ಇರುವದು, ವಿಳಂಬ

English: kaalaharaNa (Kannada) = Time pass, Delay, Procastination

हिंदी: कालहरण  (कन्नड) = टाइम पास, समय बिताना, विलंब

संस्कृत: कालहरण  (कन्नड) = कालक्षेपम् , समयस्य यापनम्, विलम्ब्, कालयाप

ಅರ್ಥ

ನಾಮಪದ ೧:
ಹೊತ್ತು ಕಳೆಯುವದು, ಸಮಯ ಹಾಳು ಮಾಡುವದು, ಕಾಲ ಕ್ಷೇಪ, ಟೈಂ ಪಾಸ್, ಸಮಯ ವ್ಯರ್ಥ ಮಾಡುವದು, ಯಾವುದೇ ಉಪಯುಕ್ತ ಕೆಲಸ ಮಾಡದೇ ಕಾಲ ಕಳೆಯುವದು

ನಾಮಪದ ೨:
ತಡ ಮಾಡುವದು, ದಿನ ಮುಂದೆ ಹಾಕುತ್ತಾ ಇರುವದು, ವಿಳಂಬ ಮಾಡುವದು

ಉತ್ಪತ್ತಿ

ಈ ಪದ ಸಂಸ್ಕೃತದ ಕಾಲ ಹಾಗೂ ಹರಣ ಪದದಿಂದ ಉಂಟಾಗಿದೆ.

ಕಾಲ + ಹರಣ = ಕಾಲಹರಣ

ಕಾಲ ಎಂದರೆ ಸಂಸ್ಕೃತದಲ್ಲಿ ಸಮಯ, ಹೊತ್ತು ಎಂದರ್ಥ. 

ಹರಣ ಎಂದರೆ ನಾಶ ಮಾಡುವದು, ಹಾಳು ಮಾಡುವದು. 

ಕಾಲಹರಣ ಎಂಬ ಪದ ಈ ಎರಡು ಪದಗಳ ಸಂಗಮದಿಂದ ಆಗಿದೆ.

ಉಪಯೋಗ

ನಾಮಪದ ೧: (ಹೊತ್ತು ಕಳೆಯುವದು, ಸಮಯ ಹಾಳು ಮಾಡುವದು, ಕಾಲ ಕ್ಷೇಪ, ಟೈಂ ಪಾಸ್)

  • ನಮ್ಮ ಕಂಪನಿಗೆ ಕಾಲಹರಣ ಮಾಡುವ ಕೆಲಸಗಾರರು ಬೇಡ.
  • ಮೊಬೈಲ್ ನೋಡುತ್ತಾ ವಿದ್ಯಾರ್ಥಿ ಮಾಡಿದ ಕಾಲಹರಣ. ಪಾಲಕರಿಗೆ ದೂರು.
  • ನಿಯೋಜಿಸಿದ ಟೀಮ್ ನಿಂದ ಬರೀ ಚರ್ಚೆಯಲ್ಲೇ ಕಾಲಹರಣ.

  • ವೃಥಾ ಕಾಲಹರಣ ಮಾಡುವದು ತಪ್ಪು.

  • ಸುಮ್ಮನೆ ಓದದೇ ಕಾಲಹರಣ ಮಾಡಿ ಫೇಲಾದ ಕಾಲೇಜು ವಿದ್ಯಾರ್ಥಿಗಳು.

ನಾಮಪದ ೨: (ತಡ ಮಾಡುವದು, ದಿನ ಮುಂದೆ ಹಾಕುತ್ತಾ ಇರುವದು, ವಿಳಂಬ ಮಾಡುವದು)

  • ಕಾಲಹರಣ ಮಾಡದೇ ಮುಖ್ಯಮಂತ್ರಿಗಳ ಆದೇಶ ಪಾಲಿಸಲು ಸೂಚನೆ.
  • ಸಂಬಳ ನೀಡದೇ ಕಾಲಹರಣ ಮಾಡುತ್ತಿದ್ದಾರೆಂದು ಬ್ಯಾಂಕ್ ಸಿಬ್ಬಂದಿ ದೂರು.

  • ನಾವು ಯಾವುದೇ ರೀತಿಯ ಕಾಲಹರಣ ಮಾಡಿಲ್ಲ ತನಿಖೆ ನಡೆಯುತ್ತಾ ಇದೆ ಎಂದು ಡಿಸಿ ತಿಳಿಸಿದರು.

ವಿವರ

ಕಾಲ ಎಂದರೆ ಸಮಯ, ಹೊತ್ತು, ವೇಳೆ ಅಥವಾ ಟೈಂ. 

ಹರಣ ಎಂದರೆ ನಾಶ ಮಾಡುವದು, ಕಿತ್ತು ಕೊಳ್ಳುವದು,  ಹಾಳು ಮಾಡುವದು.

ಕಾಲ + ಹರಣ = ಕಾಲಹರಣ

ಕಾಲಹರಣ ಎಂದರೆ ಯಾವುದೇ ಕೆಲಸಕ್ಕೆ ಬರುವ ಕಾರ್ಯ ಮಾಡದೇ ಅನವಶ್ಯಕ ಹೊತ್ತು ಕಳೆಯುವದು. ಅನವಶ್ಯಕವಾಗಿ ತಡ ಮಾಡುವದು, ಮಾಡುವ ಕೆಲಸ ಮಾಡದೇ ದಿನ ಕಳೆಯುತ್ತಿರುವದು

ಕಾಲಮಾನ

ತುಂಬಾ ಹಳೆಯ ಸಂಸ್ಕೃತ ಪದ.

ಮೂಲ ಭಾಷೆ

ಸಂಸ್ಕೃತ

ಇದೇ ಅರ್ಥದ ಪದಗಳು

ಕಾಲಕ್ಷೇಪ, ಟೈಂ ಪಾಸ್, ಹೊತ್ತು ಕಳೆ

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಟೈಂ ಪಾಸ್
ಹಿಂದಿ: ಸಮಯ್ ಬಿತಾನಾ
ಸಂಸ್ಕೃತ: ಕಾಲ ಕ್ಷೇಪಂ, ಸಮಯಸ್ಯ ಯಾಪನಂ

kaalaharaNa (Kannada) Meaning in English

Time pass, Delay, Procastination

कालहरण (कन्नड) - हिंदी में अर्थ

टाइम पास, समय बिताना, विलंब

कालहरण (कन्नड) - संस्कृत अर्थ

कालक्षेपम् , समयस्य यापनम्, विलम्ब्, कालयाप

ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು