ನಮ್ಮ ಬಗ್ಗೆ

ಕನ್ನಡ ಭಾಷೆ ಬಹು ಸುಂದರ ಭಾಷೆ. ಅಲ್ವಾ? ಹಳೆ ಕನ್ನಡ, ನಡು ಕನ್ನಡ ಹಾಗೂ ಆಧುನಿಕ ಕನ್ನಡ ಹೀಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಕನ್ನಡ ಉಳಿದು ಬೆಳೆದು ಬಂದಿದೆ.

ನಮ್ಮ ಮುಖ್ಯ ಗುರಿ

ಇಂದು ಹೆಚ್ಚಿನ ಮನೆಗಳಲ್ಲಿ ಕನ್ನಡ ನಿಘಂಟು ಅರ್ಥಾತ್ ಡಿಕ್ಷನರಿ ಇಲ್ಲ! ಹಾಗಂತ ಎಲ್ಲ ಕನ್ನಡ ಪದಗಳ ಅರ್ಥ ಎಲ್ಲರಿಗೆ ಗೊತ್ತಿದೆ ಅಂತಾನೂ ಅಲ್ಲ. 

ಇಂದಿನ ಪೀಳಿಗೆಗೆ ಕೂಡಾ ಕನ್ನಡ ನಿಘಂಟನ್ನು ತೆರೆದು ಪ್ರತಿ ಪದದ ಅರ್ಥ ಅರಿಯುವ ವ್ಯವಧಾನ ಸಹ ಇಲ್ಲ. 

ಪದಗಳ ಉತ್ಪತ್ತಿ, ಮೂಲ, ಬಳಕೆ, ಉದಾಹರಣೆ ಹಾಗೂ ಅರ್ಥವನ್ನು ಸರಳವಾಗಿ ಕನ್ನಡದಲ್ಲಿ ವಿವರಿಸುವದು ಹಾಗೂ ಇಂಗ್ಲೀಷ್/ಹಿಂದಿಯಲ್ಲಿ ಕೂಡಾ ನೀಡುವದು ಪದಮಂಜರಿ.ಕಾಂ ಉದ್ದೇಶ.

ಇದು ಸಂಪೂರ್ಣ ಉಚಿತ! 

ನೀವೂ ಸಹಾಯ ಮಾಡಬಹುದು

ಈ ಪ್ರಯತ್ನಕ್ಕೆ ನೀವೂ ಕೂಡಾ ಕೈ ಜೋಡಿಸ ಬಹುದು. ಹೇಗೆ?
  • ಪದಮಂಜರಿ ತಾಣ ಹಾಗೂ ಯೂಟ್ಯೂಬ್ ಚಾನೆಲ್ ಬಳಸಿ.
  • ನಿಮ್ಮ ಗೆಳೆಯರಿಗೂ ಸಹ ಪದಮಂಜರಿ ಬಗ್ಗೆ ತಿಳಿಸಿ.
  • ತಾಣದಲ್ಲಿ ಯಾವುದೇ ರೀತಿಯ ಮಾಹಿತಿಯಲ್ಲಿ ದೋಷ ಇದ್ದರೆ ತಿಳಿಸಿ.
ನಿಮ್ಮ ಆಶಿರ್ವಾದ ನಮ್ಮ ಮೇಲಿರಲಿ.

ಇಂತಿ ನಿಮ್ಮವ
--ರಾಜೇಶ ಹೆಗಡೆ 
ವಿಸ್ಮಯನಗರಿ.ಕಾಂ

ಕಾಮೆಂಟ್‌‌ ಪೋಸ್ಟ್‌ ಮಾಡಿ