ಬ್ಯುಸಿ


ಬ್ಯುಸಿ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

{tocify} $title={ ವಿಷಯ ಸೂಚಿ}

ಅರ್ಥ: ಕಾರ್ಯ ನಿರತ, ಕೆಲಸ ಮಾಡುತ್ತಾ ಇರುವದು, ಯಾವುದೋ ಕಾರ್ಯದಲ್ಲಿ ಮಗ್ನ ನಾಗಿರುವದು

English: Byusi (Kannada) = Busy

हिंदी: ब्युसि (कन्नड) = व्यस्त

संस्कृत: ब्युसि (कन्नड) = व्यस्त

ಅರ್ಥ

ಕ್ರಿಯಾಪದ:
ಕೆಲಸ ಮಾಡುತ್ತಾ ಇರುವದು, ಯಾವುದೋ ಕಾರ್ಯದಲ್ಲಿ ಮಗ್ನ ನಾಗಿರುವದು

ಗುಣವಾಚಕ:
ಕಾರ್ಯ ನಿರತ, ಕಾರ್ಯ ಮಗ್ನ, ತೀರಾ ಚಟುವಟಿಕೆಯುಳ್ಳ

ಉತ್ಪತ್ತಿ

ಹಳೆಯ ಡಚ್ ಭಾಷೆಯಲ್ಲಿ bezich, ಜರ್ಮನಿಯ besig, ಹಳೆಯ ಇಂಗ್ಲಿಷ್ ನಲ್ಲಿ bisig ಈ ಬ್ಯುಸಿ (Busy) ಪದದ ಮೂಲ.

ಉಪಯೋಗ

ಕ್ರಿಯಾಪದ:
  • ಅವನು ಆಫೀಸಿನ ಕೆಲಸದಲ್ಲಿ ಬ್ಯುಸಿ ಇದ್ದುದರಿಂದ ಫೋನ್ ಎತ್ತಲಿಲ್ಲ.
  • ಆ ಸೂಪರ್ ಸ್ಟಾರ್ ತುಂಬಾ ಬ್ಯುಸಿ.
  • ಚುನಾವಣಾ ಪ್ರಚಾರದಲ್ಲಿ ಮಾನ್ಯ ಎಂ.ಎಲ್.ಎ ಅವರು ಬ್ಯುಸಿ.
  • ಅವರು ಶಾಪಿಂಗ್ ಅಲ್ಲಿ ಬ್ಯುಸಿ ಆಗಿದ್ದಾರೆ.
ಗುಣವಾಚಕ:
  • ಮನೋಹರ ತುಂಬಾ ಬ್ಯುಸಿ ಮನುಷ್ಯ.
  • ಬ್ಯುಸಿ ರಸ್ತೆಯಲ್ಲಿ ಬಂದ ಆನೆ.
  • ತನ್ನ ಬ್ಯುಸಿ ಶೆಡ್ಯೂಲ್ ಮಧ್ಯದಲ್ಲಿ ಬಡವರ ಸೇವೆ ಮಾಡುವ ನಟಿ.
  • ಈ ಬ್ಯುಸಿ ಲೈಫ್ ಅಲ್ಲಿ ವ್ಯಾಯಾಮ ಮಾಡಲು ಸಮಯ ಸಿಗದು.

ವಿವರ

-- o --

ಕಾಲಮಾನ

-- o --

ಮೂಲ ಭಾಷೆ

ಇಂಗ್ಲೀಷ್

ಇದೇ ಅರ್ಥದ ಪದಗಳು

ಕಾರ್ಯಮಗ್ನ, ಕಾರ್ಯನಿರತ, ಚಟುವಟಿಕೆಯುಳ್ಳ

ವಿರುದ್ಧ ಅರ್ಥದ ಪದಗಳು

ಫ್ರೀ, ಕೆಲಸ ಇಲ್ಲದಿರುವದು

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ಬಿಜಿ, ಬ್ಯುಸಿ
ಹಿಂದಿ: ವ್ಯಸ್ತ 
ಸಂಸ್ಕೃತ: ವ್ಯಸ್ತ

Byusi(Kannada) - Meaning in English

Busy

ब्युसि (कन्नड) - हिंदी में अर्थ

व्यस्त

ब्युसि (कन्नड) - संस्कृत अर्थ

व्यस्त
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು