ವಿಡಿಯೋ



ವಿಡಿಯೋ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.

ಅರ್ಥ

ನಾಮಪದ

  1. ಟಿವಿಯಲ್ಲಿ ಕಾಣಿಸುವ ದೃಶ್ಯ
  2. ಡೆಸ್ಕ್ ಟಾಪ್ ಮಾನಿಟರ್, ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನಿನಲ್ಲಿ ಪ್ಲೇ ಮಾಡುವ ಯಾವುದೇ ಚಲಿಸುವ ಚಿತ್ರಗಳು
  3. ಡಿಜಿಟಲ್ ಕ್ಯಾಮೆರಾ ಬಳಸಿ ರೆಕಾರ್ಡ್ ಮಾಡಿದ ಚಲಿಸುವ ಚಿತ್ರಗಳು. ಅದಕ್ಕೆ ಧ್ವನಿ ಇರಬಹುದು ಅಥವಾ ಇರದೆಯೂ ಇರಬಹುದು. 
ಗುಣವಾಚಕ
  1. ಚಿಕ್ಕ ತೆರೆಯಲ್ಲಿ ಚಲಿಸುವ ಚಿತ್ರ ತೋರಿಸುವದಕ್ಕೆ ಸಂಬಂಧಿಸಿದ
  2. ಡಿಜಿಟಲ್ ಚಲಿಸುವ ಚಿತ್ರ ರೆಕಾರ್ಡ್ ಮಾಡುವದಕ್ಕೆ ಸಂಬಂಧಿಸಿದ

ಉಪಯೋಗ

ನಾಮಪದ

  1. ಮೊಬೈಲ್ ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು ಸಾಕ್ಷಿ ಆಯ್ತು.
  2. ಮದುವೆಯ ವಿಡಿಯೋ ಚಿತ್ರೀಕರಣ ಕೂಡಾ ಮಾಡುತ್ತಿದ್ದರು.
  3. ನಮ್ಮ ಮನೆಯ ಟಿವಿಯಲ್ಲಿ ವಿಡಿಯೋ ಮಾತ್ರ ಬರ್ತಾ ಇದೆ ಆಡಿಯೋ ಕೇಳ್ಸ್ತಾ ಇಲ್ಲ.
  4. ಯೂಟ್ಯೂಬ್ ನಲ್ಲಿ ನೂರಾರು ಕೋಟಿ ಜನ ವಿಡಿಯೋ ವೀಕ್ಷಣೆ  ಮಾಡುತ್ತಾರೆ.
  5. ನಾನು ವಾಟ್ಸಾಪ್ ಅಲ್ಲಿ ವಿಡಿಯೋ ಕಳ್ಸಿದ್ದೆ ನೋಡಿದೆಯಾ?
ಗುಣವಾಚಕ
  1. ವಿಡಿಯೋ ಗೇಮ್ ಆಡುತ್ತಿದ್ದ ಮಕ್ಕಳಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.
  2. ಆ ಕಾರ್ಯಕ್ರಮದ ಲೈವ್ ವಿಡಿಯೋ ಸ್ಟ್ರೀಮಿಂಗ್ ಪ್ರಪಂಚಾದ್ಯಂತ ಯೂಟ್ಯೂಬ್ ಅಲ್ಲಿ ಆಯ್ತು.
  3. ಅಂದು ವಿಡಿಯೋ ಕ್ಯಾಮೆರಾದ ಬ್ಯಾಟರಿ ಡೌನ್ ಆಗಿತ್ತು.
  4. ಯೂಟ್ಯೂಬ್ ಅಲ್ಲಿ ನನ್ನ ವಿಡಿಯೋ ಚ್ಯಾನೆಲ್ ಇದೆ.

ಉತ್ಪತ್ತಿ

ಈ ಪದದ ಉತ್ಪತ್ತಿ ಆಗಿದ್ದು ಟೆಲಿವಿಷನ್ ತಂತ್ರಜ್ಞಾನದ ಆರಂಭದ ಸಮಯದಲ್ಲಿ. ಟಿವಿಯಲ್ಲಿ ದೃಶ್ಯ ಹಾಗೂ ಧ್ವನಿ ಎರಡೂ ಬರುತ್ತದೆ. ಆ ದೃಶ್ಯ ಭಾಗಕ್ಕೆ ವಿಡಿಯೋ ಎಂದು ಕರೆಯಲಾಯ್ತು.

ಲ್ಯಾಟಿನ್ ಅಲ್ಲಿ ವಿಡೆರೆ (videre) ಅಂದರೆ ನೋಡುವದು ಎಂದರ್ಥ.
ಇಂಗ್ಲಿಷ್ ಅಲ್ಲಿ ಆಡಿಯೋ (audio) ಅಂದರೆ ಧ್ವನಿ ಎಂದರ್ಥ.

ಈ ಲ್ಯಾಟಿನ್ ಭಾಷೆಯ ವಿಡೆರೆ ಹಾಗೂ ಇಂಗ್ಲಿಷ್ ನ ಆಡಿಯೋ ಪದಗಳ ಸಂಗಮವೇ ವಿಡಿಯೋ.

Videre ಪದವನ್ನು Audio ಪದ ರೀತಿ ಬದಲಾಯಿಸಿದಾಗ  = Video
ವಿಡೆರೆ + ಡಿಯೋ = ವಿಡಿಯೋ

ಹಿನ್ನೆಲೆ

ವಿಡಿಯೋ ಪದ ಕಿರುತೆರೆಗಳಲ್ಲಿ ತೋರಿಸಲ್ಪಡುವ ದೃಶ್ಯಗಳಿಗೆ ಸಾಮಾನ್ಯವಾಗಿ ಬಳಸುತ್ತಾರೆ.

ಸಾಮಾನ್ಯವಾಗಿ ದೊಡ್ಡ ತೆರೆಯಲ್ಲಿ ಚಿತ್ರಮಂದಿರದಲ್ಲಿ ತೋರಿಸುವ ದೃಶ್ಯಗಳಿಗೆ ಈ ಪದ ಬಳಸುವದಿಲ್ಲ. ಸಿನಿಮಾ, ಮೂವಿ, ಚಲನಚಿತ್ರ, ಫಿಲಂ ಎಂದು ಕರೆಯುತ್ತಾರೆ. ಅವುಗಳನ್ನು ಕಿರುತೆರೆಗಳಲ್ಲಿ ನೋಡುವಾಗ ಕೂಡಾ ಅದೇ ಪದ ಬಳಸುತ್ತಾರೆ. ಉದಾ: ಇವತ್ತು ಟಿವಿಯಲ್ಲಿ ಫಿಲಂ ನೋಡಿದೆ ಕಣೋ. 

ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸಿರೀಸ್ ಮೊದಲಾದವುಗಳನ್ನು ಟಿವಿ, ಯೂಟ್ಯೂಬ್ ಎಲ್ಲೇ ನೋಡುವಾಗ ಹಾಗೇ ಕರೆಯಲ್ಪಡುತ್ತದೆ. ವಿಡಿಯೋ ನಾವು ಅವನ್ನು ನೋಡುವ ಫಾರ್ಮಾಟ್ ಆಗಿರುತ್ತದೆ.

ಕಾಲಮಾನ

೧೯೩೫ರ ಸಮಯದಲ್ಲಿ ಟೆಲಿವಿಶನ್ ಬ್ರಾಡ್ ಕಾಸ್ಟ್ ಆರಂಭವಾದಾಗ ಟಿವಿಯಲ್ಲಿ ನೋಡುವ ದೃಶ್ಯಗಳಿಗೆ ವಿಡಿಯೋ ಎಂದು ಕರೆಯಲಾಯ್ತು. ಆಮೇಲೆ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಅಲ್ಲಿ ನೋಡುವ ಚಲನೆ ಇರುವ ದೃಶ್ಯಗಳಿಗೆ ಸಹ ವಿಡಿಯೋ ಎಂದೇ ಕರೆಯುತ್ತಾರೆ.

ಮೂಲ ಭಾಷೆ

ಇಂಗ್ಲಿಷ್

ವಿವರ

ಪ್ರತಿ ಸೆಕಂಡಿಗೆ ೨೪ ಕ್ಕೂ ಹೆಚ್ಚು ಚಿತ್ರ ತೆಗೆದು ಅದನ್ನು ಪರದೆಯ ಮೇಲೆ ಮೂಡಿಸಿದಾಗ ಮನುಷ್ಯನ ಕಣ್ಣು ಅದನ್ನು ಚಲಿಸುವ ಚಿತ್ರ ಅರ್ಥಾತ್ ವಿಡಿಯೋ ರೂಪದಲ್ಲಿ ನೋಡುತ್ತದೆ. 

ವಿಡಿಯೋ ಪ್ಲೇ ಮಾಡಿದಾಗಲೂ ೨೪, ೩೦, ೬೦, ೧೨೦ ಚಿತ್ರಗಳನ್ನು ಮೂಡಿಸಿ ದೃಶ್ಯಗಳನ್ನು ಆಧುನಿಕ ಟಿವಿ, ಸ್ಮಾರ್ಟ್ ಫೋನ್, ಕಂಪ್ಯೂಟರ್ ಮಾನಿಟರ್, ಲ್ಯಾಪ್ ಟಾಪ್ ಗಳು ತೋರಿಸುತ್ತವೆ.

ವಿಡಿಯೋ ತಂತ್ರಜ್ಞಾನದ ಆಧಾರದ ಮೇಲೆ ಅನಾಲಾಗ್ ಹಾಗೂ ಡಿಜಿಟಲ್ ವಿಡಿಯೋ ಎನ್ನುತ್ತಾರೆ.

ಒಂದು ನಿಗದಿತ ಸಮಯದಲ್ಲಿ ತೋರಿಸಲಾಗುವ ಚಿತ್ರಗಳಿಗೆ ಫ್ರೇಮ್ ರೇಟ್ ಎನ್ನುತ್ತಾರೆ. ಉದಾಹರಣೆಗೆ ಸಿನಿಮಾದಲ್ಲಿ ಸಾಮಾನ್ಯವಾಗಿ ೨೪ ಫ್ರೇಮ್ ಅಂದರೆ ಚಿತ್ರ ಗಳನ್ನು ಒಂದು ಸೆಕಂಡಿಗೆ ತೋರಿಸಲಾಗುತ್ತದೆ.

ಇಂದು ೩೦, ೬೦, ೧೨೦, ೨೪೦ ಫ್ರೇಮ್ ಗಳನ್ನು ಒಂದು ಸೆಕಂಡಿಗೆ ರೆಕಾರ್ಡ್ ಮಾಡುವ ಡಿಜಿಟಲ್ ವಿಡಿಯೋ ಕ್ಯಾಮೆರಾ ಲಭ್ಯವಿದೆ.

ಇದೇ ಅರ್ಥದ ಪದಗಳು

ವಿರುದ್ಧ ಅರ್ಥದ ಪದಗಳು

ಇದು ಇರುವ ಬೇರೆ ಪದಗಳು

  • ವಿಡಿಯೋ ಕ್ಯಾಮೆರಾ
  • ವಿಡಿಯೋ ಗೇಮ್
  • ವಿಡಿಯೋ ಪ್ಲೇಯರ್
  • ವಿಡಿಯೋ ಸ್ಟ್ರೀಮಿಂಗ್
  • ವಿಡಿಯೋ ಮಾನಿಟರ್
  • ವಿಡಿಯೋ ಗುಣಮಟ್ಟ
  • ವಿಡಿಯೋ ಫೈಲ್
  • ವಿಡಿಯೋ ರಿಸೊಲ್ಯೂಶನ್
  • ವಿಡಿಯೋ ಪ್ಲೇ

ಇದು ಇರುವ ನುಡಿಗಟ್ಟು

ಸಂಬಂಧ ಪಟ್ಟ ಪದಗಳು

ಆಧಾರಿತ ಪದಗಳು

ಬೇರೆ ಭಾಷೆಗಳಲ್ಲಿ

ಇಂಗ್ಲಿಷ್: ವಿಡಿಯೋ
ಹಿಂದಿ: ವಿಡಿಯೋ
ಸಂಸ್ಕೃತ: ಚಲನಚಿತ್ರ

Meaning in English

Video

हिंदी में अर्थ

विडियो

संस्कृत अर्थ

चलन चित्र
ರಾಜೇಶ ಹೆಗಡೆ

ಲೇಖಕರು ಒಬ್ಬ ನುರಿತ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ವಿಸ್ಮಯನಗರಿ.ಕಾಂ, ಪದಮಂಜರಿ.ಕಾಂ, ಗಣಕಪುರಿ.ಕಾಂ ನಿರ್ಮಾತೃ ಕೂಡಾ. ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ತಿಳಿಸ ಬೇಕು ಅನ್ನುವದು ಅವರ ಮಹದಿಚ್ಚೆ. ಕನ್ನಡ ಬ್ಲಾಗ್ಗಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಫೋಟೋಗ್ರಾಫಿ, ವಿಡಿಯೋ ಗ್ರಾಫಿ, ಪ್ರವಾಸ ಮುಖ್ಯ ಹವ್ಯಾಸ. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯನ್ನು ತಕ್ಕ ಮಟ್ಟಿಗೆ ಬಲ್ಲರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು