ನಾಗಾಲೋಟ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
ಅರ್ಥ: ನಾಲ್ಕೂ ಕಾಲು ಬಳಸಿ ಜೋರಾಗಿ ಓಡುವದು, ವೇಗವಾಗಿ ಜಾಸ್ತಿ ಆಗುವದು
English: naagaloTa (Kannada) = gallop
हिंदी : नागालोट (कन्नड) = सरपट
संस्कृत : नागालोट (कन्नड) = तरङ्ग
ಅರ್ಥ
ಕ್ರಿಯಾವಾಚಕ
೧. ನಾಲ್ಕೂ ಕಾಲು ಬಳಸಿ ವೇಗವಾಗಿ ಓಡುವದು
ಕ್ರಿಯಾಪದ
೨. ವೇಗವಾಗಿ ಏರುತ್ತಿರುವದು ಅಥವಾ ಹೆಚ್ಚುತ್ತಿರುವದು
ಉತ್ಪತ್ತಿ
ನಾಲ್ಕು ಕಾಲು ಇರುವ ಪ್ರಾಣಿಗಳಿಗೆ ಕನ್ನಡದಲ್ಲಿ ನಾಗಾಲು ಎನ್ನುತ್ತಾರೆ.
ನಾಗಾಲು ಅಂದರೆ ನಾಲ್ಕೂ ಕಾಲನ್ನು ಎತ್ತಿ ವೇಗವಾಗಿ ಪ್ರಾಣಿ ಓಡುತ್ತಿದ್ದರೆ ಆ ಓಟಕ್ಕೆ ನಾಗಾಲೋಟ ಎನ್ನುತ್ತಾರೆ.
ನಾಗಾಲು + ಓಟ = ನಾಗಾಲೋಟ
ಉಪಯೋಗ
- ಹುಲಿ ಕಂಡು ಬೆದರಿದ ಕಾಡಲ್ಲಿ ಹುಲ್ಲು ಮೇಯುತ್ತಿದ್ದ ದನ ನಾಗಾಲೋಟದಿಂದ ಕಾಲ್ಕಿತ್ತಿತು.
- ವಿಕ್ರಮ ಸೇನನು ಕುದುರೆ ಏರಿ ನಾಗಾಲೋಟದಿಂದ ರಾಜಕುಮಾರಿ ರಕ್ಷಿಸಲು ಧಾವಿಸಿದನು.
- ನಿಲ್ಲದ ಪೆಟ್ರೋಲ್ ಬೆಲೆಯ ನಾಗಾಲೋಟ.
- ಚುನಾವಣೆಯಲ್ಲಿ ಪ್ರಾಮಾಣಿಕ ಅಭ್ಯರ್ಥಿಯಾದ ಸತ್ಯಮೂರ್ತಿಯವರ ಗೆಲುವಿನ ಕಡೆಗೆ ನಾಗಾಲೋಟ.
- ಎಡಬಿಡದೇ ಮುಂದುವರೆದ ಭಯಾನಕ ವೈರಸ್ ನ ನಾಗಾಲೋಟ.
ವಿವರ
ಕುದುರೆ, ಜಿಂಕೆ ಹೀಗೆ ಯಾವುದೇ ನಾಲ್ಕು ಕಾಲಿನ ಪ್ರಾಣಿಗಳು ವೇಗವಾಗಿ ಓಡುವಾಗ ನಾಲ್ಕೂ ಕಾಲಿನ ಸಹಾಯದಿಂದ ನೆಲ ಒತ್ತಿ ಹಾರುತ್ತಾ ಓಡುತ್ತವೆ ಇದಕ್ಕೆ ನಾಗಾಲು ಓಟ ಅರ್ಥಾತ್ ನಾಗಾಲೋಟ ಎನ್ನುತ್ತಾರೆ.
ಯಾವುದೇ ಪ್ರಾಣಿಯ ವೇಗ ಹೀಗೆ ನಾಲ್ಕೂ ಕಾಲು ಎತ್ತಿ ಓಡುವಾಗ ಜಾಸ್ತಿ ಇರುತ್ತದೆ.