ಅಶ್ವಮೇಧ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
{tocify} $title={ವಿಷಯ ಸೂಚಿ}
English: Ashvamedha = A ceremonial rite involving the sacrificial offering of a horse.
हिंदी: अश्वमेध = घोड़े का यज्ञ
संस्कृत: अश्वमेध = अश्वमेधयज्ञः
ಅರ್ಥ
ನಾಮಪದ:
ಕುದುರೆ ಬಲಿ ಯಾಗ, ಕುದುರೆ ಬಲಿ ಯಜ್ಞ, ಅಶ್ವಮೇಧ ಯಾಗ, ಅಶ್ವಮೇಧ ಯಜ್ಞ
ಉತ್ಪತ್ತಿ
ಅಶ್ವಮೇಧ ಪದ ಅಶ್ವ ಮತ್ತು ಮೇಧ ಪದದಿಂದ ಆಗಿದೆ.
ಅಶ್ವ + ಮೇಧ = ಅಶ್ವಮೇಧ
ಈ ಉತ್ಪತ್ತಿಯ ಪ್ರಕಾರ ಅಶ್ವ ಎಂದರೆ ಕುದುರೆ ಹಾಗೂ ಮೇಧ ಎಂದರೆ ಬಲಿ ಅಥವಾ ಬಲಿ ಪಶುವಿನ ಒಳಗಿನ ಭಾಗ ಎಂಬರ್ಥ ಇದೆ. ಅಶ್ವಮೇಧ ಯಾಗ ಎಂದರೆ ಕುದುರೆ ಬಲಿ ಕೊಡುವ ಯಾಗ ಎಂಬರ್ಥ ಕೊಡುತ್ತದೆ.
ಮೇಧ ಎಂದರೆ ಸಂಸ್ಕೃತದಲ್ಲಿ ಬುದ್ದಿವಂತಿಕೆ , ತಿರುಳು ಎಂಬರ್ಥ ಕೂಡ ಇದೆ . ಆದರೆ ಇಲ್ಲಿ ಬಲಿ , ಬಲಿಯ ಒಳ ಭಾಗಗಳು / ತಿರುಳು ಎಂಬರ್ಥ.
ಅಶ್ವಮೇಧ ಯಾಗದ ಕೊನೆಯ ಘಟ್ಟದಲ್ಲಿ ಯುದ್ಧಾಶ್ವ (ಯಾಗದ ಒಂದು ವರ್ಷ ಮೊದಲು ತಿರುಗಾಡಿ ರಾಜ್ಯ ವಿಸ್ತಾರಕ್ಕೆ ಕಳುಹಿಸಿದ ಕುದುರೆ) ಯನ್ನು ವಿಶಸನ ಅರ್ಥಾತ್ ಆಲಭನ ಮಾಡಿ ಅದರ ಅಂಗಗಳನ್ನು ಒಂದೊಂದಾಗಿ ಅಗ್ನಿ ಕುಂಡಕ್ಕೆ ಹಾಕಿ ಹೋಮ ಮಾಡಲಾಗುತ್ತದೆ .
ಕುದುರೆಯ ಒಳ ತಿರುಳು ಬಳಕೆ ಯಾಗಕ್ಕೆ ಆಗುವ ಕಾರಣ ಈ ಯಾಗದ ಹೆಸರು ಅಶ್ವಮೇಧ ಯಾಗ.
ಇದೇ ರೀತಿಯ ಅರ್ಥದಲ್ಲಿ ಮೇಧ ಪದ ಬಳಸಿರುವ ಪದವೆಂದರೆ ನರಮೇಧ,
ಉಪಯೋಗ
ನಾಮಪದ: (ಕುದುರೆ ಬಲಿ ಯಾಗ)
ಕುರುಕ್ಷೇತ್ರ ಯುದ್ಧದ ನಂತರ ಯುಧಿಷ್ಠಿರ ಅಶ್ವಮೇಧ ಯಾಗವನ್ನು ಮಾಡಿದರು .
ಅಶ್ವಮೇಧ ಯಾಗದ ಯಜ್ಞ ಕುದುರೆಯನ್ನು ತಿರುಗಾಡಲು ಬಿಡಲಾಯ್ತು .
ವಿವರ
ಶತಪಥ ಬ್ರಾಹ್ಮಣ ಗ್ರಂಥದ ೧ ೩ ನೆಯ ಕಾಂಡದಲ್ಲಿ ಅಶ್ವಮೇಧ ಯಾಗ ಮಾಡುವ ವಿಧಾನದ ಬಗ್ಗೆ ಸಂಪೂರ್ಣ ವಿವರಣೆ ಇದೆ .
ಯಾಗ ನಡೆಸುವ ವಿಧಾನ
ಅಶ್ವಮೇಧ ಯಾಗದಲ್ಲಿ ಕುದುರೆಯನ್ನು ಪೂಜಿಸಿ ಸ್ವತಂತ್ರವಾಗಿ ಬಿಡಲಾಗುತ್ತಿತ್ತು. ಅದು ಕ್ರಮಿಸುವ ಜಾಗ ಎಲ್ಲ ಯಾಗ ನಡೆಸುವ ರಾಜನದ್ದು. ಅದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಆ ಕುದುರೆಯನ್ನು ಬೇರೆ ರಾಜ್ಯ ದವರು ಕಟ್ಟಿಹಾಕಬೇಕು ಇಲ್ಲ ಕೊಲ್ಲಬೇಕು. ಆಗ ಹಿಂಬಾಲಿಸುತ್ತಿದ್ದ ಸೈನಿಕರು ಹೋಗಿ ಯಾಗ ನಡೆಸುವ ರಾಜನಿಗೆ ವಿಷಯ ತಿಳಿಸುತ್ತಿದ್ದರು. ಅವನು ದಂಡೆತ್ತಿ ಬಂದು ಯುದ್ಧ ಮಾಡುತ್ತಿದ್ದ .
ಒಂದು ವರ್ಷದ ವರೆಗೆ ಕುದುರೆ ಹೋದ ಜಾಗ ಎಲ್ಲ ಯಾಗ ನಡೆಸುವ ರಾಜನದ್ದು . ಆಮೇಲೆ ವಾಪಾಸ್ ಕುದುರೆ ಓಯ್ದು ಮುನ್ನೂರು ವಿವಿಧ ಪಶುಗಳ ಜೊತೆ ಆ ಕುದುರೆಯನ್ನು ವಿಶಸನ ಮಾಡಿ ಅಗ್ನಿಗೆ ಅರ್ಪಿಸಿ ಹೋಮ ಮಾಡಲಾಗುತ್ತಿತ್ತು.
ರಾಜನ ಮುಖ್ಯ ರಾಣಿ (ಮಹಿಷಿ) ಆ ಕುದುರೆಯನ್ನು ಸಾಂಕೇತಿಕವಾಗಿ ಕೊಂದು ಆ ಸತ್ತ ಕುದುರೆ ಜೊತೆ ರಾತ್ರಿಯಿಡಿ ಕಾಲ ಕಳೆಯ ಬೇಕಿತ್ತು ಅಥವಾ ಅದರ ಜೊತೆ ರಾಣಿಯನ್ನು ಕೂರಿಸುತ್ತಿದ್ದರು.
ಆಮೇಲೆ ಕುದುರೆಯ ಅಂಗಗಳನ್ನು ಒಂದೊಂದಾಗಿ ಹೋಮ ಕುಂಡಕ್ಕೆ ಹಾಕಿ ಅಗ್ನಿಗೆ ಅರ್ಪಿಸುತ್ತಿದ್ದರು.
ರಾಜ್ಯ ವಿಸ್ತಾರ ಹಾಗೂ ಚಿಕ್ಕ ರಾಜರ ಎದುರು ದೊಡ್ಡ ರಾಜರ ಶಕ್ತಿ ಪ್ರದರ್ಶನವೇ ಅಶ್ವ ಮೇಧ ಯಾಗದ ಗುರಿ.
ಕಾಲ ಕಳೆದಂತೆ ಈ ಅಶ್ವಮೇಧ ಯಾಗದ ಆಚರಣೆ ಮರೆಯಾಗಿದೆ.
ಈ ಅಶ್ವಮೇಧ ಯಾಗ ನಡೆಸುವ ರೀತಿ ಮಹಾಭಾರತದಲ್ಲಿ ವಿವರವಾಗಿ ರಾಮಾಯಣದಲ್ಲಿ ಕೂಡ ಸಂಕ್ಷಿಪ್ತವಾಗಿ ಬರೆಯಲ್ಪಟ್ಟಿದೆ . ಹಲವು ಶಾಸನಗಳು ಇತರ ರಾಜರು ನಡೆಸಿದ ಬಗ್ಗೆ ಉಲ್ಲೇಖ ಮಾಡಿವೆ .
ಮಹಾಭಾರತದಲ್ಲಿ ಅಶ್ವಮೇಧ
ಮಹಾಭಾರತದ ಹದಿನೆಂಟು (18) ಪರ್ವಗಳಲ್ಲಿ ಹದಿನಾಲ್ಕನೆಯದು (14) ಅಶ್ವಮೇಧಿಕಾ ಪರ್ವ. ಇದು ಕುರುಕ್ಷೇತ್ರ ಯುದ್ಧದ ನಂತರ ತನ್ನ ರಾಜ್ಯ ಸ್ಥಾಪಿಸಲು ಯುಧಿಷ್ಟಿರ ಮಾಡಿದ ಅಶ್ವಮೇಧ ಯಜ್ಞದ ಅತ್ಯಂತ ವಿಶದವಾಗಿ ಬರೆದಿದ್ದಾರೆ. ಇಲ್ಲಿ ಪುರಾತನ ಭಾರತದ ಅಶ್ವಮೇಧ ಯಾಗ ಸಿದ್ಧತೆ, ನಡೆಸುವ ಕ್ರಮ ಎಲ್ಲ ಇದೆ.
ಅಶ್ವಮೇಧಿಕಾ ಪರ್ವದಲ್ಲಿ 96 ಭಾಗಗಳಿದ್ದು ಅರ್ಜುನ ಮತ್ತು ಕುದುರೆ ಹಿಂತಿರುಗುವ ಬಗ್ಗೆ, ಕುದುರೆ ಜೊತೆಗೆ 300 ಇತರ ಪಶುಗಳನ್ನು ಬಂಧಿಸಿ ಅವುಗಳನ್ನು ಹೋಮಕ್ಕೆ ಅರ್ಪಿಸುವ ಬಗ್ಗೆ ವಿವರಣೆ ಇದೆ. ಕುದುರೆಯನ್ನು ವಿಶಸನ ಮಾಡಿ ಅದರ ಬಳಿ ರಾಣಿಯನ್ನು ಕೂರಿಸುತ್ತಾರೆ.
ನಂತರ ಮರುದಿನ ಕುದುರೆಯ ಅಂಗಗಳನ್ನು ಒಂದೊಂದಾಗಿ ಅಗ್ನಿಯಲ್ಲಿ ಹೋಮ ಮಾಡುವ ವಿವರಣೆ ಕೂಡಾ ಇದೆ.
ವಾಲ್ಮೀಕಿ ರಾಮಾಯಣದಲ್ಲಿ ಅಶ್ವಮೇಧ
ವಾಲ್ಮೀಕಿ ರಾಮಾಯಣದ ಬಾಲಕಾಂಡದಲ್ಲಿ ರಾಮನ ತಂದೆ ದಶರಥ ಮಹಾರಾಜ ಅಶ್ವಮೇಧ ಯಾಗ ಮಾಡಿದ ಬಗ್ಗೆ ಉಲ್ಲೇಖ ಇದೆ.
ಬಾಲಕಾಂಡದ 14ನೇ ಸರ್ಗ ದಲ್ಲಿ ಅಶ್ವಮೇಧ ಯಾಗದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ರಾಣಿಯಂದಿರು ಅಶ್ವವನ್ನು ಪೂಜಿಸಿ ಅದರ ವಿಶಸನ ಆದ ಮೇಲೆ ರಾತ್ರಿಯಿಡೀ ಆ ಸತ್ತ ಕುದುರೆ ಬಳಿಯೇ ಮಲಗಿರಬೇಕು. ಇಲ್ಲೂ ಕೂಡಾ ಮುನ್ನೂರು ಪಶುಗಳ ಬಲಿ ನೀಡಿದ ಉಲ್ಲೇಖ ಇದೆ.
ಉತ್ತರ ಕಾಂಡದಲ್ಲಿ ಕೂಡ ಅಶ್ವಮೇಧ ಯಾಗ ನಡೆಸಿದ ಉಲ್ಲೇಖ ಇದೆ .
ಇಷ್ಟಲ್ಲದೇ ಹಲವು ಶಾಸನಗಳು ಕಳೆದ 1741ರವರೆಗೂ ಹಲವು ರಾಜರ ಕಾಲದಲ್ಲಿ ಅಶ್ವಮೇಧ ಯಾಗ ನಡೆದ ಬಗ್ಗೆ ಉಲ್ಲೇಖಿಸಿವೆ.
ಕಾಲಮಾನ
ಇದು ತುಂಬಾ ಹಳೆಯ ಸಂಸ್ಕೃತ ಪದ. ರಾಮಾಯಣದಲ್ಲೂ ಮಹಾಭಾರತದಲ್ಲೂ ಈ ಯಾಗದ ಪ್ರಸ್ತಾಪ ಇದೆ.
ಮೂಲ ಭಾಷೆ
ಸಂಸ್ಕೃತ
ಇದೇ ಅರ್ಥದ ಪದಗಳು
ಕುದುರೆ ಬಲಿ ಯಾಗ
ಅಶ್ವಮೇಧ - ಬೇರೆ ಭಾಷೆಗಳಲ್ಲಿ
ಇಂಗ್ಲಿಷ್: ಎ ಸೆರೆಮೊನಿಲ್ ರೈಟ್ ಇನ್ವೊಲ್ವಿಂಗ್ ದ ಸಕ್ರಿಫಿಶಿಯಲ್ ಒಫರಿಂಗ್ ಆಫ್ ಎ ಹಾರ್ಸ್
ಹಿಂದಿ: ಘೋಡೆ ಕಾ ಯಜ್ಞ
ಸಂಸ್ಕೃತ: ಅಶ್ವಮೇಧ ಯಜ್ಞಃ
Ashvamedha (Kannada) - Meaning in English
A ceremonial rite involving the sacrificial offering of a horse.
अश्वमेध (कन्नड) - हिंदी में अर्थ
घोड़े का यज्ञ - अश्वमेध एक प्राचीन भारतीय यज्ञ है, जिसमें एक घोड़े को छोड़ दिया जाता था और राजा के सैनिक उस घोड़े के साथ यात्रा करते थे। यह यज्ञ राजाओं द्वारा अपने साम्राज्य की सीमा का विस्तार करने और अपने प्रभुत्व को स्थापित करने के लिए किया जाता था। यदि कोई राज्य उस घोड़े को पकड़ लेता या रोकता, तो राजा उस राज्य पर आक्रमण करता और उसे अपने साम्राज्य में शामिल कर लेता।
अश्वमेध यज्ञ को शक्ति और साम्राज्य की प्रतिष्ठा का प्रतीक माना जाता था।
अश्वमेध (कन्नड) - संस्कृत अर्थ
अश्वमेधयज्ञः