ಏಕಾಗ್ರತೆ ಪದದ ಅರ್ಥ, ಉತ್ಪತ್ತಿ, ಉದಾಹರಣೆಯನ್ನು ವಿವರವಾಗಿ ಈ ಪುಟದಲ್ಲಿ ನೋಡೋಣ.
{tocify} $title={ ವಿಷಯ ಸೂಚಿ}
English: ekaagrate (Kannada) = Concentration
हिंदी: एकाग्रते (कन्नड) = एकाग्रता
संस्कृत: एकाग्रते (कन्नड) = एकाग्रता
ಅರ್ಥ
ಉತ್ಪತ್ತಿ
ಏಕ + ಅಗ್ರತಾ = ಏಕಾಗ್ರತಾ
ಏಕ ಹಾಗೂ ಅಗ್ರತಾ ಪದಗಳು ಸವರ್ಣದೀರ್ಘ ಸಂಧಿಯಿಂದ ಕೂಡಿ ಏಕಾಗ್ರತಾ ಪದ ಆಗಿದೆ.
ಏಕ ಎಂದರೆ ಒಂದು ಎಂದರ್ಥ.
ಅಗ್ರತಾ ಎಂದರೆ ಮೊದಲ ಸ್ಥಾನ, ಹೆಚ್ಚು ಪ್ರಾಮುಖ್ಯತೆ ಕೊಡುವದು, ಜಾಸ್ತಿ ಮಹತ್ವ ನೀಡುವದು, ಮೊದಲ ಆದ್ಯತೆ ಕೊಡುವದು ಅರ್ಥ
ಏಕಾಗ್ರತಾ / ಏಕಾಗ್ರತೆ ಎಂದರೆ ಒಂದೇ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಮಾಡುವದು, ಒಂದು ವಿಷಯದಲ್ಲಿ ಮಗ್ನನಾಗಿ ಬೇರೆ ಕಡೆ ತಲೆ ಹಾಕದೇ ಅದಕ್ಕೆ ಜಾಸ್ತಿ ಮಹತ್ವ ನೀಡುವದು, ಒಂದಕ್ಕೆ ಮೊದಲ ಆದ್ಯತೆ ನೀಡುವದು, ಒಂದೇ ಕಡೆ ಗಮನವಿಡುವದು
ಉಪಯೋಗ
ನಾಮಪದ:
- ಏಕಾಗ್ರತೆಯಿಂದ ಓದಿದರೆ ಎಂತಹ ವಿಷಯ ಕೂಡಾ ಅರ್ಥ ಆಗುತ್ತದೆ.
- ಯಾವುದೇ ಕೆಲಸ ಮಾಡುವಾಗ ಏಕಾಗ್ರತೆ ತುಂಬಾ ಮುಖ್ಯ.
ವಿವರ
ಏಕಾಗ್ರತೆ ಎಂದರೆ ಒಂದೇ ಒಂದು ಕೆಲಸಕ್ಕೆ ಅಥವಾ ವಿಷಯಕ್ಕೆ ಮಹತ್ವ ನೀಡಿ ಅದರಲ್ಲೆ ಮಗ್ನರಾಗುವದು. ಒಂದೇ ಚಟುವಟಿಕೆಯನ್ನು ಬೇರೆ ಕಡೆ ತಲೆ ಹಾಕದೇ ಮಾಡುವದು.
ಕಾಲಮಾನ
ಮೂಲ ಭಾಷೆ
ಇದೇ ಅರ್ಥದ ಪದಗಳು
ವಿರುದ್ಧ ಅರ್ಥದ ಪದಗಳು
ಏಕ ವಚನ / ಬಹು ವಚನ
ಏಕಾಗ್ರತೆ ಪದ ಏಕ ವಚನ ಆಗಿದ್ದರೆ ಏಕಾಗ್ರತೆಗಳು ಬಹುವಚನ ಪದ ಆಗಿದೆ.
ಸಾಮಾನ್ಯವಾಗಿ ಏಕಾಗ್ರತೆಯ ಬಹುವಚನ ರೂಪವನ್ನು ಹಲವು ಪದಗಳ ಜೊತೆ ಬಳಸಿದಾಗ ಒತ್ತು ಕೊಡಲು ಬಳಸಲಾಗುತ್ತದೆ.
ಉದಾ:
ದೇವರ ಪೂಜೆ ಮಾಡುವಾಗ ಭಕ್ತಿ, ಶೃದ್ಧೆ ಹಾಗೂ ಏಕಾಗ್ರತೆಗಳು ತುಂಬಾ ಮುಖ್ಯ
ಗಮನಿಸಿ ಇಲ್ಲಿ ಏಕಾಗ್ರತೆಗಳು ಎಂದರೆ ಭಕ್ತಿ, ಶೃದ್ಧೆ ಸೇರಿ ಅದಕ್ಕೆ ಬಹುವಚನದ ಬಳಕೆ ಸಾಮಾನ್ಯವಾಗಿ ಆಗಿರುತ್ತದೆ. ಯಾಕೆಂದರೆ ಒಂದಕ್ಕಿಂತ ಹೆಚ್ಚು ಏಕಾಗ್ರತೆ ಎಂಬುದು ಅಷ್ಟು ಸಮಂಜಸ ಅಲ್ಲ.
ವಿಭಕ್ತಿ | ಕಾರಕಾರ್ಥ | ಪ್ರತ್ಯಯ | ವಿಭಕ್ತಿ ಪ್ರತ್ಯಯ ರೂಪ | ಉದಾಹರಣೆ |
ಪ್ರಥಮಾ | ಕರ್ತೃರ್ಥ | ಉ | ಏಕಾಗ್ರತೆಯು | ಏಕಾಗ್ರತೆಯು ಜೀವನಕ್ಕೆ ಅತಿ ಮುಖ್ಯ. |
ದ್ವಿತೀಯಾ | ಕರ್ಮಾರ್ಥ | ಅನ್ನು | ಏಕಾಗ್ರತೆಯನ್ನು | ಏಕಾಗ್ರತೆಯನ್ನು ಕಾಪಾಡಿಕೊಳ್ಳದೇ ಓದಿದ್ದದರಿಂದ ಏನೂ ತಲೆಗೆ ಹೋಗಲಿಲ್ಲ. |
ತೃತೀಯಾ | ಕರಣಾರ್ಥ | ಇಂದ | ಏಕಾಗ್ರತೆಯಿಂದ | ಏಕಾಗ್ರತೆಯಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. |
ಚತುರ್ಥಿ | ಸಂಪ್ರಧಾನ | ಗೆ, ಇಗೆ, ಕ್ಕೆ | ಏಕಾಗ್ರತೆಗೆ | ಅಲ್ಲಿ ನಡೆಯುತ್ತಿದ್ದ ಗಲಾಟೆಯಿಂದ ನನ್ನ ಏಕಾಗ್ರತೆಗೆ ದಕ್ಕೆ ಬಂತು. |
ಪಂಚಮಿ | ಅಪಾದಾನ | ದೆಸೆಯಿಂದ | ಏಕಾಗ್ರತೆಯ ದೆಸೆಯಿಂದ | ಏಕಾಗ್ರತೆಯ ದೆಸೆಯಿಂದ ನಾನು ಪರೀಕ್ಷೆ ಪಾಸ್ ಆದೆ. |
ಷಷ್ಟಿ | ಸಂಬಂಧ | ಅ | ಏಕಾಗ್ರತೆಯ | ಏಕಾಗ್ರತೆಯ ಪ್ರಾಮುಖ್ಯತೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. |
ಸಪ್ತಮಿ | ಅಧಿಕರಣ | ಅಲ್ಲಿ, ಅಲಿ, ಒಳು | ಏಕಾಗ್ರತೆಯಲ್ಲಿ | ಏಕಾಗ್ರತೆಯಲ್ಲಿ ಮನೋಹರ ಓದುತ್ತಿದ್ದನು. |
ಸಂಬೋಧನೆ | ಅಭಿಮುಖೀಕರಣ | ಆ, ಎ, ಈ, ಇರಾ | ಏಕಾಗ್ರತೆಯೇ | ಏಕಾಗ್ರತೆಯೇ ನನ್ನ ಬಳಿ ಬಾರೆಯಾ? |
ಬೇರೆ ಭಾಷೆಗಳಲ್ಲಿ
Ekaagrate - (Kannada) Meaning in English
Concentration
एकाग्रते (कन्नड) - हिंदी में अर्थ
एकाग्रते (कन्नड) - संस्कृत अर्थ
ಈ ಲೇಖನ ಹೇಗನಿಸಿತು?ಈ ಪದದ ಬಗ್ಗೆ ಹೆಚ್ಚಿನ ವಿವರ ನಿಮಗೆ ಗೊತ್ತಾ? ಅಥವಾ ಏನಾದ್ರೂ ತಪ್ಪಿದೆಯಾ? ಕಮೆಂಟ್ ಹಾಕ್ತೀರಾ? ಈ ತಾಣ ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.